Kelirondu Katheya ಕೇಳಿರೊಂದು ಕಥೆಯ: Recent Episodes

Kelirondu Katheya Team

Kannada Stories for children.

View Details

ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು .  ದುಬಾರಿಯಾದ ಆಟದ ಸಾಮಾನಿರಲಿ ,  ಮೂಲೆಯಲ್ಲಿ ಬಿದ್ದಿರೋ  ಕಲ್ಲಿರಲಿ , ಮಕ್ಕಳಿಗೆ  ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ . 

ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು .  ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ಸಾಮಾನಿನ ತರಹ ತೋರಿತು . 

ಪ್ರಾಣಿಯನ್ನು  ಮಕ್ಕಳು ಏನು ಮಾಡಿದರು ?  ಬನ್ನಿ , ಈ ಕತೆಯಲ್ಲಿ ತಿಳಿಯೋಣ . 

View Details

ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ?  ಹೌದು .. ರಾಮಾಯಣದ  ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ . 

View Details

ಕಾಡಿನಲ್ಲಿ  ವಾಸ ಆಗಿದ್ದ  ಕಾಗೆ ಮರಿಗೆ ನೀರಿನಲ್ಲಿ  ಈಜುತ್ತಿದ್ದ  ಬೆಳ್ಳಗೆ ಸುಂದರವಾಗಿದ್ದ  ಹಂಸವನ್ನ  ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು .  

ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ?  ಸಂವಿತ್ ಫೌಂಡೇಶನ್ ಅವರ ಸಹಯೋಗದಲ್ಲಿ ಮಾಡಿದ  ಈ ಪುಟ್ಟ  ಕತೆ ಹೇಳುವ ನೀತಿ ಮಾತ್ರ ಬಹಳ ದೊಡ್ಡದು . 

View Details

ಕಾಡಿನಲ್ಲಿ  ಆನೆ ಮರಿ ಒಂದು ಹುಟ್ಟಿತು . ಎಲ್ಲ ರೀತಿಯಲ್ಲೂ ಬೇರೆ  ಆನೆಗಳ ಥರಾನೇ ಇದ್ದ ಆನೆ ಮರಿ ನೋಡೋಕೆ ಮಾತ್ರ ನೀಲಿ  ಬಣ್ಣ ಇತ್ತು !.  ಆ ಬಣ್ಣದ ಜತೆ  ಕಾಡಿನಲ್ಲಿ ಬೇರೆ  ಮರಿಗಳ ಜತೆ  ಬೇರೆಯೋಕೆ ಈ  ಆನೆ ಮರಿಗೆ  ಸಾಧ್ಯ  ಆಯಿತೇ  ? 

View Details

ರಕ್ಷಿತ್ ಗೆ  ಕಾರುಗಳು ಅಂದರೆ ತುಂಬಾ  ಇಷ್ಟ.  ಒಂದು  ದಿವಸ  ಅವನ  ಅಮ್ಮ ಅವನಿಷ್ಟದ  ಕೆಂಪು  ಕಾರನ್ನ ಗೊತ್ತಿಲ್ಲದೇ ಬಡ ಮಕ್ಕಳಿಗೆ  ದಾನ ಮಾಡಿದಾಗ ರಕ್ಷಿತ್ ಗೆ  ಆದ  ದುಃಖ ಅಷ್ಟಿಷ್ಟಲ್ಲ . ಆಗ ರಕ್ಷಿತ್ ಏನು  ಮಾಡಿದ  ?  ಬನ್ನಿ ಈ ಕತೆ ಕೇಳಿ  ತಿಳಿದುಕೊಳ್ಳೋಣ 

View Details

” ಕೇಳಿರೊಂದು ಕಥೆಯ ” ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು  ಮಾಡಿದ್ದೆವು . 

ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ  ಈ  ವಾರದ  ಕತೆ  “ರೋಹಿತನ ಸಾಹಸ ” .  ಹೊರಗೆ ಜೋರಾಗಿ ಬೀಳುತ್ತಿದ್ದ ಮಳೆಯಲ್ಲಿ ಯಾವುದೋ ಪ್ರಾಣಿ ಕೂಗುವ ಸದ್ದು ಕೇಳಿಸ್ತು . ಮನೆಯಲ್ಲಿ ಬೇಜಾರು ಮಾಡಿಕೊಂಡು ಕುಳಿತಿದ್ದ ರೋಹಿತ್ ಆಗ ಏನು ಮಾಡಿದ ? 

ಕೇಳಿ ಈ ರೋಚಕ ಕಥೆ

View Details

" ಕೇಳಿರೊಂದು ಕಥೆಯ " ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು  ಮಾಡಿದ್ದೆವು . 

ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ  ಈ  ವಾರದ  ಕತೆ  "ಹೂದಾನಿ " .  ತೇಜಸ್ , ಅಂಕಿತ್ ಹಾಗೂ ದಿವ್ಯ ಮನೆಯಲ್ಲಿ  ಆಟ ಆಡ್ತಿದ್ದಾಗ ಮನೆಯಲ್ಲಿದ್ದ  ಹೂದಾನಿ ( Flower Vase ) ಬಿದ್ಧು ಹೋಗತ್ತೆ .  ಆಗ , ಆ ಮಕ್ಕಳೇನು ಮಾಡಿದರು . ಕೇಳಿ  ಈ ಕುತೂಹಲಕಾರಿ ಕಥೆ . 

View Details

ಮರಳುಗಾಡಿನಲ್ಲಿ ವಾಸ ಮಾಡೋ ಒಂಟೆ ಅಸಾಮಾನ್ಯ ಪ್ರಾಣಿ .  ದಿನಗಟ್ಟಲೆ ನೀರಿಲ್ಲದೆ ಬಿಸಿಲಿನಲ್ಲಿ ಇರುವ ಶಕ್ತಿ ಇರುವ ಈ ಪ್ರಾಣಿಯ ಬಗ್ಗೆ ನಮ್ಮ ಪುಟಾಣಿ ಕೇಳಿಗಾರ್ತಿ ಪ್ರಖ್ಯಾ ಇನ್ನಷ್ಟು ವಿಷಯಗಳನ್ನು ಕಥೆಯ ರೂಪದಲ್ಲಿ ನಿರೂಪಿಸಿದ್ದಾಳೆ . 

View Details

ಈದ್ ಹಬ್ಬ ಮುಸಲ್ಮಾನರು ಆಚರಣೆ ಮಾಡುವ ಮಹತ್ವದ ಹಬ್ಬಗಳಲ್ಲೊಂದು .  ರಂಜಾನ್ ತಿಂಗಳಲ್ಲಿ ಬರುವ ಈ ಹಬ್ಬದ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ !

View Details

4 ವರ್ಷದ  ಪುಟ್ಟ  ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸುವ " ಪಾರಿವಾಳ ಮತ್ತು ಇರುವೆಯ " ಕತೆ . 

ಇದರ ಮೂಲ ಕತೆ ಇಲ್ಲಿ ಕೇಳಬಹುದು  - https://kelirondukatheya.org/ep95/

View Details

4 ವರ್ಷದ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸಿರುವ "ಮಿಸಾಕೊ ಮತ್ತು ಓನಿ " " ಕತೆ . 

ಇದರ ಮೂಲ ಕಥೆ ಇಲ್ಲಿ ಕೇಳಬಹುದು  - https://kelirondukatheya.org/misako-and-oni/

View Details

4 ವರ್ಷದ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ "ಸಿಂಹದ  ಮೀಸೆ " ಕಥೆಯನ್ನು ನಿರೂಪಿಸಿ  ಕಳಿಸಿದ್ದಾನೆ . 

View Details

Narration of popular story - The woodcutter and the ax by our listener Shravan Jois. 

The original story is available at https://kelirondukatheya.org/ep93/ 

View Details

A young listener sharing a self narrated cute story called ಕರಡಿ ಕತೆ . 

View Details

We get a lot of submissions from our listeners, each of which is special because they took the time to share their special talent.  Once in a while, we get something so unique, it stays with us a long time.   

6-year-old Srishti and her mother have collaborated to make this story.  While the story narration is very rhythmic  and almost feels like song, the background effects with Veena make the effort extra special. 

Thank you Shruthi avare and also to little Srishti.  

View Details

3 ವರ್ಷದ ವಿಹಾ (  Viha Nithundila ) ನಿರೂಪಿಸಿರುವ ".  Rooster Raga ಅನ್ನುವ  ಮುದ್ದಾದ  ಕತೆ .   ಕತೆಯ ಜತೆ ತಂದೆ ತಾಯಿಗಳು ಕೊಟ್ಟಿರುವ Background ಸಂಗೀತ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ . 

View Details

ಈ ಸಲದ ವಿಶೇಷ ವ್ಯಕ್ತಿ , ಕನ್ನಡತಿ , ಬಾಹ್ಯಾಕಾಶ ವಿಜ್ಞಾನಿ  ಶ್ರೀಮತಿ ಬಿ. ಪಿ . ದಾಕ್ಷಾಯಿಣಿ .  ಮಂಗಳ ಗ್ರಹದ ಬಗ್ಗೆ ಸಂಶೋಧನೆ ಮಾಡಲು 2014ರಲ್ಲಿ  ಭಾರತದ ವಿಜ್ಞಾನಿಗಳು ತಯಾರಿಸಿ, ಹಾರಿಸಿದ ಉಪಗ್ರಹದ ಹೆಸರು "ಮಂಗಳಯಾನ". 

ಈ ಮಹತ್ಸಾಧನೆಯ ಹಿಂದೆ ಇದ್ದ ಪ್ರಮುಖ ವಿಜ್ಞಾನಿಗಳಲ್ಲಿ ಶ್ರೀಮತಿ . ಬಿ ಪಿ ದಾಕ್ಷಾಯಿಣಿ ಅವರು ಕೂಡ ಒಬ್ಬರು . 

ಈ ಕಂತಿನ  ಇನ್ನೊಂದು ವಿಶೇಷ  ಅಂದರೆ , ದಾಕ್ಷಾಯಿಣಿ ಅವರ ಜತೆ ಮಾತನಾಡುವ ಅವಕಾಶ ಸಿಕ್ಕಿದ್ದು . ಅವರ ದನಿಯಲ್ಲಿ , ಅವರ ಬಾಲ್ಯ , ಓದು , ನೌಕರಿ , ಅವರ ಹವ್ಯಾಸಗಳು ಇವೆಲ್ಲದರ ಬಗ್ಗೆ ತಿಳಿಯುವ ಅವಕಾಶ ಸಿಕ್ಕಿದ್ದು ಸಂತಸದ ಸಂಗತಿ . 

ಅಶ್ವಿನಿ ಅವರ ದನಿಯಲ್ಲಿ ಮೂಡಿರುವ ಈ ಕಂತಿನಲ್ಲಿ , ದಾಕ್ಷಾಯಿಣಿ ಅವರ ಕೆಲವು ಮಾತಿನ ತುಣುಕುಗಳನ್ನೂ ಸೇರಿಸಲಾಗಿದೆ .  ಕೇಳಿ . 

View Details

"ವ್ಯಕ್ತಿ ಪರಿಚಯ " ಸರಣಿಯಲ್ಲಿ  ಈ ಸಲದ  ಪರಿಚಯ "ಹೆಲೆನ್ ಕೆಲ್ಲೆರ್ ". ಹೆಲೆನ್ ಕೆಲ್ಲೆರ್ , ಅತಿ ವಿಶಿಷ್ಟ ಮಹಿಳೆ .  ಕಣ್ಣು , ಕಿವಿ ಕೇಳದೆ ಇದ್ದರೂ ಬಾಯಿ , ಹಾಗೂ ಸ್ಪರ್ಶದ  ( Touch ) ಸಹಾಯದಿಂದ ಕಾಲೇಜು ಶಿಕ್ಷಣ ಪಡೆದವರು .  ನಂತರ , ಪ್ರಪಂಚದಾದ್ಯಂತ  ಲಕ್ಷಾಂತರ ಅಂಗವಿಕಲರಿಗೆ ಸ್ಪೂರ್ತಿಯಾಗಿ ನಿಂತವರು .  

ಇವರ ಜೀವನದ ರೋಚಕ ಕತೆ , ಈ ಸಲ "ಕೇಳಿರೊಂದು ಕತೆಯಾ " ದಲ್ಲಿ . 

View Details

" ವ್ಯಕ್ತಿ ಪರಿಚಯ " ಸರಣಿಯಲ್ಲಿ ಮುಂದುವರೆಯುತ್ತಾ ಈ ಸಲ ಕನ್ನಡಿಗ ಅನಂತ್ ಪೈ ಅವರ ಬಗ್ಗೆ ತಿಳಿದುಕೊಳ್ತಿದ್ದೇವೆ . ಭಾರತೀಯ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಸ್ವಲ್ಪ ಕೊರತೆಯೇ . ಅದರಲ್ಲೂ ಪುರಾಣ ಕತೆಗಳನ್ನು ಬಿಟ್ಟರೆ , ಆಧುನಿಕ ಸಾಹಿತ್ಯದಲ್ಲಿ Easy Reading ಆಗಿರುವ  ಮಕ್ಕಳ ಸಾಹಿತ್ಯ ಅತಿ ಕಡಿಮೆ ಅಂತಲೇ ಹೇಳಬೇಕು .  ಈ ಕೊರತೆ ಮನಗಂಡ ಪೈ  ಅವರ ಕೊಡುಗೆ ಭಾರತೀಯ ಮಕ್ಕಳ ಸಾಹಿತ್ಯಕ್ಕೆ ವಿನೂತನ .

View Details

ಲುಡ್ವಿಗ್ ವ್ಯಾನ್ ಬೀಥೋವನ್ ( Ludwig Van Beethoven) , Western Classical ಸಂಗೀತದಲ್ಲಿ ಅತಿ ದೊಡ್ಡ ಹೆಸರು . ಕರ್ನಾಟಕ ಸಂಗೀತದಲ್ಲಿ ಪುರಂದರ ದಾಸರು ಹೇಗೋ , ವಿಶ್ವ ಸಂಗೀತ ಕ್ಷೇತ್ರದಲ್ಲಿ ಬಿಥೋವನ್ ಕೂಡ . ಕ್ಲಾಸಿಕಲ್ ಸಂಗೀತ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಮಹದಾಸೆ ಬಿಥೋವನ್ ಅವರ ಸಿಂಫೊನಿ ಗಳಲ್ಲಿ ನುಡಿಸಬೇಕು ಅನ್ನುವುದು . 

ಅತ್ಯುತ್ತಮ Composer ಆಗಿದ್ದ ಬೀಥೋವನ್ ಕಿವುಡ ಹಾಗೂ ಮೂಕನಾಗಿದ್ದ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ? 

ಈ ವಾರದ "ವ್ಯಕ್ತಿ ಪರಿಚಯ " ಸರಣಿಯಲ್ಲಿ ಬೀಥೋವನ್ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ . 

ಬೀಥೋವನ್ ಅವರ ಇನ್ನೂ ಕೆಲವು ಚಿತ್ರಗಳು , ಹಾಗೂ ಅವರ ಸಂಗೀತದ ತುಣುಕುಗಳನ್ನು ನಮ್ಮ ವೆಬ್ಸೈಟ್ https://kelirondukatheya.org/ep113 ರಲ್ಲಿ ನೋಡಬಹುದು . 

View Details

"ವ್ಯಕ್ತಿ ಪರಿಚಯ " ಸರಣಿಯ  ಮೊದಲನೇ ಕಂತು .  ಪ್ರಸಿದ್ಧ ವ್ಯಕ್ತಿಗಳ ಜೀವನದ ತುಣುಕುಗಳನ್ನು   ಮಕ್ಕಳಿಗೆ ಅವರದೇ  ರೀತಿಯಲ್ಲಿ  ತಿಳಿ ಹೇಳುವ ಪ್ರಯತ್ನ  ಇದು .  

ಈ ಸಲದ ವ್ಯಕ್ತಿ ಪ್ರಪಂಚದೆಲ್ಲೆಡೆ "Confident Mary " ಅಂತಲೇ ಕರೆಸಿಕೊಂಡ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ . 

ಮೇರಿ ಬಾಕ್ಸಿಂಗ್ ನಲ್ಲಿ  ಎಷ್ಟು ಪ್ರಸಿದ್ದರೋ ಅವರ ಹಿನ್ನಲೆ  ಕೂಡ ಅಷ್ಟೇ ರೋಚಕವಾದದ್ದು . 

http://kelirondukatheya.org/stories/ep112 ರಲ್ಲಿ ಮೇರಿ ಅವರ  ಕೆಲವು  ಚಿತ್ರಗಳನ್ನೂ , ಅವರ  ಬಗ್ಗೆ ಇನ್ನೂ  ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು . 

View Details

ಸೂರ್ಯ ಚಂದ್ರರು ಒಂದು  ಕಾಲದಲ್ಲಿ  ನಮ್ಮ  ನಿಮ್ಮ  ಥರ  ಭೂಮಿಯ ಮೇಲೆ ಇದ್ರಂತೆ . ! . ಆಶ್ಚರ್ಯ ಆಗುತ್ತಲ್ಲಾ ?  ಹೌದು , ಸೂರ್ಯ ಚಂದ್ರರು ಮನುಷ್ಯರ ಥರ  ಮನೆಯಲ್ಲಿ  ಇರ್ತಿದ್ರು ಅಂತ  ಆಫ್ರಿಕನ್ನರು  ನಂಬುತ್ತಾರಂತೆ . 

ಹಾಗಾದ್ರೆ , ಈಗ್ಯಾಕೆ ಆಕಾಶದಲ್ಲಿ  ಇರ್ತಾರೆ ? ತಿಳಿಯೋಕೆ , ಈ ಕತೆ  ಕೇಳಿ . 

View Details

ಸಿಡುಕ ಸಿದ್ದನಿಗೆ ಸಿಟ್ಟು ಎಷ್ಟು ಜಾಸ್ತಿಯೋ ಪೆದ್ದುತನ ಸ್ವಲ್ಪ ಅದಕ್ಕಿಂತ ಜಾಸ್ತಿ.  ಈ ಕತೆಯಲ್ಲಿ ಸಿದ್ಧನಿಗೆ ಗುಹೆಯ ಮನುಷ್ಯನಿಂದ ಊಹಿಸಲಾರದಷ್ಟು ಐಶ್ವರ್ಯ ಸಿಕ್ಕರೂ, ಪಾಪ ಅದನ್ನು ಉಳಿಸಿಕೊಳ್ಳೋಲಾಗಲಿಲ್ಲ. ಹೇಗೆ, ಯಾಕೆ ಅನ್ನುವುದನ್ನು ಕತೆಯಲ್ಲಿ ಕೇಳೋಣ.

ನಮಗೆ ಎಷ್ಟು ಅನುಭವ ಇದೆಯೋ ಅಷ್ಟೇ ದಕ್ಕುವುದು ಅನ್ನುವುದಕ್ಕೆ ಈ ಕತೆ ಉತ್ತಮ ಉದಾಹರಣೆ.

View Details

ಕೇಳಿರೊಂದು  ಕಥೆಯ  ಸರಣಿಯ  ಕತೆಗಳಲ್ಲಿ  ನಾಸ್ರುದ್ದೀನ್  ಹೊಡ್ಜಾನ ಕತೆಗಳು ಅತಿ  ಜನಪ್ರಿಯ.  2019 ರಲ್ಲಿ ಪ್ರಕಟವಾಗಿದ್ದ  ಈ ಕತೆಯ ಮರು  ಪ್ರಸಾರ . 

ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ  ? 

ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ  . 

View Details

ಹಸುಗಳಿಗೂ ಅವುಗಳ ಸುತ್ತ ಸದಾ ಜುಯ್ ಅಂತ ಸುತ್ತುವ ನೊಣಗಳಿಗೂ ಅದೇನೋ ವಿಚಿತ್ರ ಸಂಬಂಧ . ವೈಜ್ಞಾನಿಕವಾಗಿ ನೊಣಗಳಿಂದ ಕಣ್ಣಿನ ರೋಗ  ( Pink Eye ) ಬರುವುದು ಸಹಜವಾದರೂ ,  ಆಫ್ರಿಕಾದ ಜಾನಪದ ಕತೆಗಳ ಪ್ರಕಾರ ನೊಣಗಳು ತೊಂದರೆ ಕೊಡುವುದಕ್ಕೆ ಹಸುಗಳೇ ಕಾರಣವಂತೆ .  !

View Details

ಬಾವಲಿ ( Bat ) ವಿಚಿತ್ರ  ಹಾಗೂ ಕುತೂಹಲಕಾರಿ ಜೀವಿ . ಅತ್ತ ಪ್ರಾಣಿಯೂ ಅಲ್ಲದೆ , ಇತ್ತ ಹಕ್ಕಿಯೂ ಅಲ್ಲದ ಬಾವಲಿ ರಾತ್ರಿ ಅಷ್ಟೇ ಹೊರ ಬರುತ್ತವೆ . 

ವೈಜ್ಞಾನಿಕವಾಗಿ ಬಾವಲಿಗಳಿಗೆ ದೃಷ್ಟಿ ಅಷ್ಟು ಬಲವಾಗಿ ವೃದ್ಧಿಯಾಗಿಲ್ಲ , ಬದಲಾಗಿ Echo location , ಅಂದರೆ ಸೂಕ್ಷ್ಮ ಧ್ವನಿ  ತರಂಗಗಳ ನೆರವಿನಿಂದ ದಾರಿ , ಊಟ  ಹುಡುಕುತ್ತವೆ  .

ನೂರಾರು ವರ್ಷಗಳ ಹಿಂದೆ ಆಫ್ರಿಕಾದ ಜನರಿಗೆ ಈ ಬಾವಲಿ ರಾತ್ರಿಯಷ್ಟೇ ಹೊರಗೇಕೆ ಬರುತ್ತದೆ ಅನ್ನುವ ಪ್ರಶ್ನೆಗೆ  ಸೊಗಸಾದ ಕತೆಯ ಮೂಲಕ ವಿವರಿಸಿದ್ದಾರೆ .  

ಕೇಳೋಣ ಬನ್ನಿ . 

View Details

ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಗೆಳೆಯರೇ .  

ದೀಪಾವಳಿ ಭಾರತೀಯರಿಗೆ ವಿಶೇಷ ಹಬ್ಬ . ಈ ಹಬ್ಬದ ಹಿಂದೆ ಬಹಳಷ್ಟು ಉಪಕತೆಗಳಿವೆ . 

ಈ ಕಂತಿನಲ್ಲಿ ಈ ಹಬ್ಬದ ಬಗ್ಗೆ  ಮೂರು ಕತೆಗಳನ್ನು  ಕೇಳೋಣ .

View Details

ಗುಡುಗು , ಸಿಡಿಲು ಮಳೆಗಾಲದಲ್ಲಿ ಸರ್ವೇ ಸಾಮಾನ್ಯ .  ಗುಡುಗು ಕೇಳುವ ಮೊದಲೇ ಸಿಡಿಲು ಕಾಣುವುದೂ ಸಾಮಾನ್ಯ .  ಆದರೆ , ಸಾವಿರಾರು ವರ್ಷಗಳ ಹಿಂದೆಯೇ  ಇದನ್ನು ಮನಗಂಡು ಗುಡುಗು , ಸಿಡಿಲಿನ ಸುತ್ತ ಹೆಣೆದಿರುವ ಈ ಕತೆ ,  ಸಿಡಿಲನ್ನು ಚೂಟಿ ಟಗರಿಗೂ ,  ಗೂಡುಗನ್ನು  ಮಗನನ್ನು ಸರಿ ಹಾದಿಗೆ  ತರುವ ಅಮ್ಮನಿಗೂ  ಹೋಲಿಸುವ  ಮೂಲಕ ಕೇಳುವುದಕ್ಕೆ  ವಿಶಿಷ್ಟ  ಅನುಭವ  ಕೊಡುತ್ತದೆ . 

Thunder and Lightning are common phenomena. This folktale compare lightning to a mischievous Ram and the thunder as the mom that follows her son around scolding him for his mischiefs.  A unique story. 

View Details

ಸುಳ್ಳು ಹೇಳುವುದು ಅಂದರೆ ಸಹಜ . ಅದರಲ್ಲೂ , ಕೆಲವರಿಗೆ ಸುಳ್ಳು ಹೇಳುವುದು ಚಟ ವಾಗಿ ಬಿಟ್ಟಿರುತ್ತದೆ . ಹಾಗಿರುವಾಗ , ಒಂದೂ ಸುಳ್ಳು ಹೇಳದೆ ಇರುವ  ಮನುಷ್ಯ  ಒಬ್ಬ  ಬದುಕಿದ್ದ  ಅಂದರೆ ಆಶ್ಚರ್ಯ  ಆಗುತ್ತೆ  ಅಲ್ವಾ ? 

ಈ ಕತೆಯಲ್ಲಿ ಆ ಮನುಷ್ಯನನ್ನ  ಭೇಟಿ ಮಾಡೋಣ . ಅವನಿಂದ ಸುಳ್ಳು ಹೇಳಿಸೋಕೆ ಪಾಡು ಪಟ್ಟ ರಾಜನ ಬಗ್ಗೆಯೂ ಕೇಳೋಣ 

View Details

ಕಳೆದ  ವಾರ ಇದೇ  ಕತೆಯ ಸರಳ  ಗನ್ನಡ  ಅವತರಣಿಕೆ ( version ) ಅನ್ನು ಮಾಡಿದ್ದೆವು . ಈ ವಾರ , ಜೈರಾಜ್ ಗಲಗಲಿ ಅವರು ಈ ಕತೆಯನ್ನು ಉತ್ತರ ಕರ್ನಾಟಕ ಶೈಲಿ ಒಳಗ ಹೇಳಿದ್ದಾರೆ . 

ನೀವೂ , ನಾವೂ ಕೇಳಿ  ಮಜಾ ತಗಳ್ಳೋಣಾಂತ ? ಏನಂತೀರಿ ? 

View Details

ಪಂಚತಂತ್ರದ ಕತೆಗಳಲ್ಲಿ ನರಿ ಬುದ್ದಿವಂತಿಕೆ  ಹಾಗೂ ಕಪಟತನಕ್ಕೆ ಹೆಸರುವಾಸಿ . ಆಫ್ರಿಕಾದ ಜಾನಪದ ಕತೆಗಳಲ್ಲಿ  ತೋಳಕ್ಕೆ ನರಿಯ ಸ್ಥಾನ .  

ಈ ಕತೆಯಲ್ಲಿ ಹಿಂದೆ ತೋಳದಿಂದ ಆದ ಮೋಸ ಮರೆಯದ ಸಿಂಹಕ್ಕೆ ತೋಳ ಮತ್ತೆ ಸಿಕ್ಕಿ  ಬೀಳುತ್ತದೆ . ತೋಳ ಸಿಂಹದಿಂದ ಪಾರು ಹೇಗೆ ಆಗುತ್ತದೆ ಅನ್ನುವುದನ್ನು ಕೇಳೋಣ . 

View Details

ಆಫ್ರಿಕಾದಲ್ಲಿ  ತಮಟೆಯ ಆಕಾರದಲ್ಲಿರೋ ಸೋರೆಕಾಯಿ ಸಿಗುತ್ತದೆ . ಸೋರೆಕಾಯಿಯ ಉಪಯೋಗ ಕೂಡ  ಹತ್ತು  ಹಲವು  ರೀತಿಯಲ್ಲಿ .  ಅಡುಗೆಯಂತೂ  ಹೌದು , ಆದರೆ ಅಲ್ಲಿನ ಜನರು ಸೋರೆಕಾಯಿಯನ್ನು  ಒಣಗಿಸಿ , ತಿರುಳು ತೆಗೆದು , ಅದನ್ನು ನೀರು ತುಂಬುವ  ಬಿಂದಿಗೆಯಾಗಿ , ಸಾಮಗ್ರಿ  ತುಂಬಿಡುವ ಪಾತ್ರೆಯಾಗಿ ಉಪಯೋಗಿಸುತ್ತಾರೆ . 

ಈ ಸೋರೆಕಾಯಿಯ ಬಗ್ಗೆ ಕೂಡ ಜನಪದ ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವೇ .  

ಈ ಕತೆಯಲ್ಲಿ , ಮಕ್ಕಳಿಲ್ಲದ ಹೆಣ್ಣು ಮಗಳಿಗೆ ಸೋರೆಕಾಯಿಯ ಬೀಜಗಳಿಂದ ಮಕ್ಕಳು ಹುಟ್ಟಿದ  ರೋಚಕ ಕತೆ ಕೇಳೋಣ . 

View Details

ಹಕ್ಕಿಗಳಿಗೆ ಸಿಂಹ ನಂತೆ ರಾಜ ಒಬ್ಬನಿದ್ದರೆ ಹೇಗಿರ್ತಿತ್ತು ಅನ್ನುವ ಪ್ರಶ್ನೆಯನ್ನು  ಕತೆಯ ರೂಪದಲ್ಲಿ ಸೊಗಾಸಾಗಿ ವಿವರಿಸುತ್ತದೆ  ಈ ಕತೆ 

View Details

ಆಫ್ರಿಕಾದ ಜಾನಪದ ಕತೆಗಳು ಮನುಷ್ಯ ತನ್ನ ಸುತ್ತ ಮುತ್ತಲಿನ ಪ್ರಾಣಿ , ಪಕ್ಷಿ , ಪರಿಸರವನ್ನು  ಅರ್ಥ ಮಾಡಿಕೊಂಡ  ಬಗೆಯನ್ನು  ತಮ್ಮದೇ ರೀತಿಯಲ್ಲಿ ಹಿಡಿದಿಡುತ್ತವೆ .  

ಆದರೆ , ಈ ಕತೆಗಳು ಹೇಗೆ ಹುಟ್ಟಿದವು ಅನ್ನುವುದಕ್ಕೂ ಒಂದು ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ?  ಹೆಚ್ಚು ತಿಳಿಯಲು  ಈ ವಾರದ ಕತೆ ಕೇಳಿ . 

View Details

"ಆಫ್ರಿಕಾದ ಜಾನಪದ ಕತೆಗಳು " ಮಾಲಿಕೆಯಲ್ಲಿ ಈ ಕತೆ ಮೊದಲನೆಯದು . ಒಟ್ಟು ನಾವು ಮಾಡಿದ ಕತೆಗಳಲ್ಲಿ ಒಂದು ನೂರನೆಯದು ಕೂಡ .  ಮತ್ತೊಂದು ವಿಶೇಶ - ಈ ಕತೆ ಖ್ಯಾತ ಗಾಯಕಿ , ಕಲಾವಿದೆ ಶ್ರೀಮತಿ ಎಂ ಡಿ ಪಲ್ಲವಿ ಅವರ ನಿರೂಪಣೆ . 

ಅನಾಂಸಿ ಅನ್ನುವ ಜೇಡರ ಹುಳು ಪ್ರಪಂಚದ ವಿವೇಕ , ಬುದ್ದಿ ಶಕ್ತಿಯನ್ನೆಲ್ಲ ಒಟ್ಟು ಮಾಡಿ ಮಡಿಕೆಯಲ್ಲಿ ಕೂಡಿಟ್ಟು ಕೊಂಡಾಗ ಆಗಿದ್ದೇನು ? ಮುಂದಿನದನ್ನು ಪಲ್ಲವಿಯವರ ದನಿಯಲ್ಲೇ ಕೇಳಿ . 

View Details

ಈ ಸಲದ ಕತೆ ಉತ್ತರ ಕರ್ನಾಟಕ ಶೈಲಿಯಲ್ಲಿ  ನಿರೂಪಿಸಿರುವ ರಾಜನೊಬ್ಬನ  ಕತೆ .  ರಾಜನಿಗೆ ಏನು ಮಾಡಿದರೂ ರಾತ್ರಿ  ನಿದ್ರೆ ಬರುತ್ತಿರಲಿಲ್ಲ .  ಎಷ್ಟೇ ಮದ್ದು , ಗುಳಿಗೆ  ತಿಂದರೂ , ವ್ರತ , ದಾನ ಮಾಡಿದರೂ ನಿದ್ರೆ ಮಾತ್ರ ದೂರವೇ  ಉಳಿದಿತ್ತು . 

ಅಷ್ಟೆಲ್ಲ ಕಷ್ಟ ಪಟ್ಟರೂ ಗುಣವಾಗದ ರಾಜನ ನಿದ್ರೆ ಖಾಯಿಲೆಯನ್ನ   ಒಬ್ಬ ಸಾಮಾನ್ಯ ಮರ ಕಡಿಯುವವ ಗುಣ ಪಡಿಸಿದ್ದು ಹೇಗೆ . ? 

"ಮಂಗ್ಯಾ , ಮೊಸಳಿ ಕತಿ " ಆದಮೇಲೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ಎರಡನೇ ಕತೆ ಇದು . 

View Details

ಈ ಕಂತು ೨೦೧೯ ರ ಗಣೇಶ ಹಬ್ಬದ ಸಮಯದಲ್ಲಿ ಮಾಡಿದ ಕತೆ .  

ಈ ವರ್ಷದ ಗೌರಿ ಗಣೇಶ ಹಬ್ಬಕ್ಕೆ ಶಮಂತಕ ಮಣಿಯ ಕತೆ . 

View Details

ಏನು ? ಸಿಂಹದಂಥ  ಬಲಿಷ್ಠ  ಪ್ರಾಣಿ  ಎಲ್ಲಿ ? ಮೊಲದಂಥ  ಪೀಚು  ಪ್ರಾಣಿ  ಎಲ್ಲಿ ?  ಆದರೂ ಸಿಂಹದ ಶಕ್ತಿಯ ಮುಂದೆ ಮೊಲದ  ಯುಕ್ತಿಯೇ ಮೇಲಾಯಿತು . 

ಒಂದೊಂದು ಸಲ ನಮ್ಮ  ಮುಂದೆ  ಕೆಟ್ಟದ್ದು  ನಡೆಯುತ್ತಿದ್ದರೂ , ಅಸಹಾಯಕರಾಗುವುದು ಸಹಜ . ಅದರಲ್ಲೂ ಎದುರಾಳಿ ಬಲಿಷ್ಠನಾಗಿದ್ದರಂತೂ , ಇನ್ನೇನು ಎಲ್ಲ ಮುಗಿದೇ ಹೋಯಿತು ಅನ್ನಿಸುವಾಗ , ಈ  ಕತೆ ಸ್ಫೂರ್ತಿ ಕೊಡುತ್ತದೆ . 

View Details

" ಟೋಪಿ ಬೇಕಾ ಟೋಪಿ " ಅಂತ  ಕೂಗುತ್ತಾ  ಬರುವ  ಟೋಪಿ ಮಾರುವವನ ಕತೆ  ಶಾಲೆಗಳಲ್ಲಿ ನಾಟಕದ ರೂಪದಲ್ಲೋ , ಪಠ್ಯದಲ್ಲೋ ನೋಡದವರು ಕಡಿಮೆ .  ಈಗ  ಈ ಕತೆಯನ್ನು ಈಗಿನ  ಪುಟಾಣಿಗಳೂ ಕೇಳಬಹುದು . 

ಟೋಪಿ ಮಾರುವವನ ಟೋಪಿಗಳನ್ನು ಚೇಷ್ಟೆ ಮಂಗಗಳು ಹೊತ್ತುಕೊಂಡು ಮರದ   ಮೇಲೆ ಹತ್ತಿ ಕುಳಿತಾಗ ಟೋಪಿ ಮಾರುವವ  ವಾಪಸ್ ಪಡೆಯೋದಕ್ಕೆ ಏನೆಲ್ಲಾ ಸಾಹಸ  ಮಾಡಬೇಕಾಯ್ತು ಅನ್ನುವುದನ್ನು  ಈ ಕತೆ ತಿಳಿ  ಹಾಸ್ಯದೊಂದಿಗೆ ಹೇಳುತ್ತದೆ . 

View Details

ಮಾತು ಹಿತ , ಮಿತವಾಗಿರಬೇಕು ಅನ್ನುತ್ತಾರೆ .  ಜತೆಗೆ ಸಮಯೋಚಿತವಾಗಿರಬೇಕು ಕೂಡ .  ಸಲ್ಲದ  ಜಾಗದಲ್ಲಿ ಬೇಡ ಮಾತುಗಳಾಡಿದರೆ ತೊಂದರೆ ತಪ್ಪಿದ್ದಲ್ಲ ಅನ್ನುವುದಕ್ಕೆ ಈ ಕತೆ ಒಳ್ಳೆಯ ಉದಾಹರಣೆ .  ಸಹಾಯ ಬೇಕಾಗಿದ್ದ ಆಮೆಯೊಂದಕ್ಕೆ , ಬಾತುಕೋಳಿಗಳು ಸಹಾಯ ಮಾಡುವುದಕ್ಕೆ ಮೊದಲು ಒಂದು  ಷರತ್ತು ಹಾಕಿದವು .  ಆಮೇಲೆ ಏನಾಯ್ತು ಅನ್ನೋದನ್ನ ಕತೆಯಲ್ಲಿ  ಕೇಳಿ . 

View Details

ಉಪಕಾರ ಮಾಡಿದವರನ್ನು ಇಂದಿಗೂ ಮರೆಯಬಾರದು ಅಂತ  ಗಾದೆಯ ಹಾಗೆ , ಪುಟ್ಟ ಇರುವೆಯೂ , ದೊಡ್ಡ ಪಾರಿವಾಳವೂ ಒಬ್ಬರಿಗೊಬ್ಬರು  ಉಪಕಾರ  ಮಾಡಿದ್ದು  ಹೇಗೆ . ? ಪುಟ್ಟ  ಇರುವೆಯಿಂದ  ದೊಡ್ಡ ಪಾರಿವಾಳಕ್ಕೆ ಆದ  ಉಪಕಾರವಾದರೂ ಏನು . ? ಬನ್ನಿ,  ಈ ಕತೆಯಲ್ಲಿ  ತಿಳಿದುಕೊಳ್ಳೋಣ . 

View Details

ಮೊಟ್ಟೆ ಇಡುವ ಕೋಳಿ , ಬಾತು ಕೋಳಿಯ ಬಗ್ಗೆ ಕೇಳಿರ್ತೀರ  , ಆದರೆ ಚಿನ್ನದ ಮೊಟ್ಟಿ ಇಡುವ ಬಾತು ಕೋಳಿಯ ಬಗ್ಗೆ ಕೇಳಿದ್ದೀರಾ ?  

ಚಿನ್ನದ ಮೊಟ್ಟೆ ಇಡುವ  ಬಾತು ಕೋಳಿಯನ್ನು  ನೋಡಿ  ರೈತನ  ಹೆಂಡತಿ ಅಸೆ ಪಟ್ಟಿದ್ದೆ ಬೇರೆ , ಆದರೆ ಆದದ್ದೇ ಬೇರೆ . 

ದುರಾಸೆ ಪಟ್ಟರೆ ದುಃಖ ತಪ್ಪಿದ್ದಲ್ಲ  ಅನ್ನುವುದಕ್ಕೆ ಈ ಕತೆ ಒಳ್ಳೆಯ  ಉದಾಹರಣೆ . 

View Details

ಈ ವಾರ ಮತ್ತೊಂದು ಜನಪ್ರಿಯ ಕತೆ " ಮರ ಕಡಿಯುವವನ ಕತೆ ". ಪಂಚತಂತ್ರದ ಕತೆಗಳು ಅಂದ ತಕ್ಷಣ ನೆನಪು ಬರುವ ಕತೆಗಳಲ್ಲಿ ಈ ಕತೆ ಪ್ರಮುಖವಾದದ್ದು .   

ಪ್ರಾಮಾಣಿಕತೆ , ಸತ್ಯ ನಿಷ್ಠತೆ , ಸರಳತೆ ಅಂತಹ ಗುಣಗಳು ಈ ಕತೆಯಲ್ಲಿ ವಿಶೇಷವಾಗಿ ಕಾಣಸಿಗುತ್ತವೆ . 

View Details

ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು .   ತೋಳ ಹೆದರಿ ಓಡಿದ್ದು  ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ

View Details

ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು .  

ತೋಳ ಹೆದರಿ ಓಡಿದ್ದು  ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ . 

View Details

ಇಂದಿನ ಸಂಚಿಕೆಯಲ್ಲಿ ಜನಪ್ರಿಯ ಕತೆ "ಆಮೆ ಮತ್ತು ಮೊಲ "ದ ಕತೆ .  

ಪ್ರಪಂಚದ ನಾನಾ ಭಾಷೆಗಳಲ್ಲಿ ಹೇಳಪಡುವ ಈ ಕತೆ ಮಕ್ಕಳಿಂದ ದೊಡ್ಡವರ ತನಕ ಎಲ್ಲರೂ ಕೇಳಿ ಖುಷಿ ಪಡಬಹುದಾದದ್ದು .  ನೀವೂ ಕೇಳಿ , ಬೇರೆಯವರಿಗೂ ತಿಳಿಸಿ . 

ಕತೆಯನ್ನು ಕೇಳುವ ಅನುಭವವನ್ನು ಇನ್ನಷ್ಟು ಹೆಚ್ಚುಗೊಳಿಸಲು , ಈ ಕತೆ ಇರುವ ಪುಸ್ತಕವನ್ನು  ಮಕ್ಕಳಿಗೆ ಓದಿ ಹೇಳಿ . ನಂತರ , ನಮ್ಮ ವೆಬ್ಸೈಟ್ ನಲ್ಲಿರುವ ಚಿತ್ರ ಪುಟಗಳನ್ನು ಇಳಿಸಿಕೊಂಡು ಬಣ್ಣ ಹಚ್ಚಿ ಖುಷಿ ಪಡಿ . 

View Details

ನರಿ ಮತ್ತು ಡೊಳ್ಳು, ಪಂಚತಂತ್ರದ ಜನಪ್ರಿಯ ಕತೆಗಳಲ್ಲೊಂದು .

ಕಾಡಿನಲ್ಲಿ ಬರುತ್ತಿದ್ದ ಸದ್ದು ಯಾವುದೋ ಭಯಂಕರ ಪ್ರಾಣಿಯದೇ ಇರಬೇಕು ಅಂತ ಹೆದರಿಕೆಯಿಂದ ಹೆಜ್ಜೆಯಿಡುತ್ತಿದ್ದ ನರಿಗೆ ಡೊಳ್ಳು ನೋಡಿ ಇಷ್ಟೇನಾ ಅಂತ ಅನ್ನಿಸಿತು .

ಆದರೆ , ಡೊಳ್ಳು ಬಡಿಯುತ್ತಿದ್ದವರು ಯಾರು ? ತಿಳಿಯಲು ಕತೆ ಕೇಳಿ

View Details

" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .

ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ತಾಯಿ ಶಾರದೆ " ಎಂಬ ಪದ್ಯ , "ಸರಕಾರೀ ಕನ್ನಡ ಶಾಲೆಯ " ಬಗ್ಗೆ ಒಂದು ಪುಟ್ಟ ಕತೆ , ಹಾಗೂ ಕೊನೆಯಲ್ಲಿ ಒಂದು ಸಂಭಾಷಣೆ.

"ಅಯ್ಯೋ , ಸರಕಾರೀ ಶಾಲೆಯೇ ? ಅಲ್ಲೇನಿದೆ ? ಅಲ್ಲಿಗೆ ಯಾಕೆ ಮಕ್ಕಳನ್ನು ಕಳಿಸಬೇಕು ?" ಅನ್ನುವ ಈಗಿನ ಪರಿಸ್ಥಿತಿಯಲ್ಲಿ ಈ ಶಾಲೆಯ ಮಕ್ಕಳು ತೋರಿಸಿರುವ ಕ್ರಿಯಾತ್ಮಕ ಶಕ್ತಿ , ಪ್ರತಿಭೆ ಈ ಆಡಿಯೋ ಸರಣಿಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ . "ಎಲ್ಲಾ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಇದ್ದರೆ ಎಷ್ಟು ಚಂದ ? " ಅನ್ನುವ ಪ್ರತಿಕ್ರಿಯೆಗಳು ಬಹಳಷ್ಟು ಬಂದಿವೆ .

ಈ ಕಂತು , "ಇನಿ ದನಿ " ಸರಣಿಯ ಕೊನೆಯ ಕಂತು . ನಡೆಸಿಕೊಟ್ಟ ಎಲ್ಲಾ ಮಕ್ಕಳಿಗೂ , ಶಿಕ್ಷಕರಿಗೂ ಅಭಿನಂದನೆಗಳು .

View Details

" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ . 

ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ಮಂಗಳ ಗ್ರಹದಲ್ಲಿ ಪುಟ್ಟಿ " ಎಂಬ ಪದ್ಯ , "ಗಂಧರ್ವ  ಸೇನಾ " ಅನ್ನುವ ಹಾಸ್ಯ ನಾಟಕ  ನಡೆಸಿಕೊಡುತ್ತಾರೆ .

ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಹಾಗೂ ಮುದ್ದಾದ ಕಾವ್ಯ ವಾಚನ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ . 

View Details

" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ . 

ಈ ವಾರದ ಕಾರ್ಯಕ್ರಮದಲ್ಲಿ "ಬೆಣ್ಣೆ  ಕರಗಿತು " ಅನ್ನುವ ನಾಟಕ ನಡೆಸಿಕೊಡುತ್ತಾರೆ . ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ . 

ಕದ್ದು ತಂದ ಬೆಣ್ಣೆಯ ಸಲುವಾಗಿ ಜಗಳವಾಡುತ್ತಿದ್ದ ಎರಡು ಬೆಕ್ಕುಗಳಿಗೆ ಚಳ್ಳೆಹಣ್ಣು ತಿನಿಸುವ ಯೋಜನೆ ಮಾಡಿದ ಮಂಗಪ್ಪ ತಾನೇ ಪೇಚಿಗೆ ಸಿಕ್ಕಿದ  ಈ ಕತೆ ಕೇಳೋಕೆ ಬಲು ಮೋಜು . 

View Details

" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ ಚೂಟಿ ಮಕ್ಕಳಿಂದ ಪುಟ್ಟ ಹಾಡು , ಕಥೆ ನಿರೂಪಣೆ  , ನಾಟಕ , ಪ್ಲಾಸ್ಟಿಕ್ ಬಳಕೆಯ ಬಗ್ಗೆ ಕೆಲವು ಮಾತುಗಳು. 

" ಕೇಳಿರೊಂದು ಕಥೆಯ "  ತಂಡಕ್ಕೆ ಇದೊಂದು ವಿನೂತನ ಪ್ರಯತ್ನ .  ನೀವೂ ಕೇಳಿ , ನಿಮ್ಮ ಮಕ್ಕಳಿಗೂ ಕೇಳಿಸಿ . ಈ ಕಾರ್ಯಕ್ರಮ ಕೇಳಿದ ಮೇಲೆ , ನಿಮ್ಮ ಮಕ್ಕಳೂ "ಅಮ್ಮಾ , ನಾನೂ ಕಥೆ ಹೇಳ್ತೇನೆ " ಅಂತ ಹೇಳಬಹುದು . 

ನಿಮ್ಮೆಲ್ಲ ಬೆಂಬಲಕ್ಕಾಗಿ ಧನ್ಯವಾದಗಳು 

View Details

ಕಳೆದ  ಶುಕ್ರವಾರ , ಏಪ್ರಿಲ್ ೨೪ , ಡಾ ರಾಜ್ ಕುಮಾರ್ ಅವರ  ಹುಟ್ಟುಹಬ್ಬ . ಸದಭಿರುಚಿಯ ಚಲನಚಿತ್ರಗಳ ಮೂಲಕ ಅಷ್ಟೇ  ಅಲ್ಲ , ಕನ್ನಡಿಗರ ದನಿಯಾಗಿ , ಮಾನವತಾವಾದಿಯಾಗಿ ರಾಜ್ ಕುಮಾರ್ ಕನ್ನಡಿಗರಿಗೆ ಚಿರಪರಿಚಯ . 

1990 ರಿಂದ ಮುಂಚೆ ಹುಟ್ಟಿದ ಕನ್ನಡಿಗರಿಗೆ ರಾಜ್ ಕುಮಾರ್ ಪರಿಚಯವೇ ಬೇಡ . ಆದರೆ , ಮಕ್ಕಳಿಗೆ ರಾಜಕುಮಾರ್ ಅವರ ಪರಿಚಯ ಮಾಡುವ ಪ್ರಯತ್ನ ಆದಂತಿಲ್ಲ .  

ರಾಜಕುಮಾರ್  ಹುಟ್ಟುಹಬ್ಬದ  ನೆನಪಿನಲ್ಲಿ , " ಮಕ್ಕಳಿಗಾಗಿ ಡಾ  ರಾಜಕುಮಾರ್  "  , ಅವರ ವ್ಯಕ್ತಿತ್ವದ ಕಿರು ಪರಿಚಯ , ಪುಟ್ಟ ಮಕ್ಕಳಿಗಾಗಿ .  

View Details

ಭಾರತೀಯ  ಸಂಸ್ಕೃತಿಯಲ್ಲಿ ಪ್ರತಿ ಜೀವಿ , ವಸ್ತುವಿಗೂ ಒಂದು  ಸ್ವಾರಸ್ಯಕರ  ಕತೆಯುಂಟು . ಕಾಡಿನಲ್ಲಿ ಬಿದ್ದಿರುವ ಬಳ್ಳಿಗೊಂದು  ಕತೆ , ದೂರದಲ್ಲಿ  ಕಾಣುವ ಬಂಡೆಗೂ ಒಂದು  ಕತೆ .  ಇಷ್ಟಿದ್ದಾಗ , ಭಾರತದ ಪವಿತ್ರ ನದಿ ಗಂಗೆಗೂ ಒಂದು  ಕತೆ  ಇರಲೇ  ಬೇಕಲ್ವೆ ? 

View Details

ಮಹಾಭಾರತದಲ್ಲಿ ಬರುವ ಅಪೂರ್ವ ಪಾತ್ರ ಹನುಮಂತ .  ಹನುಮಂತ ಹಾಗೂ  ಭೀಮ ಪರಸ್ಪರ ಭೇಟಿಯಾಗಿ , ಹನುಮಂತ ಭೀಮನ  ಜತೆ ಕುಚೇಷ್ಟೆ ಮಾಡುವ  ಕತೆ  ಓದುವುದಕಷ್ಟೇ ಅಲ್ಲ , ಕೇಳುವುದಕ್ಕೂ ಬಹಳ  ಚಂದ . 

View Details

ದಶಾವತಾರ ಸರಣಿಯನ್ನು  ಮಾಡ ಹೊರಟಾಗ , ವಿಷ್ಣುವಿನ  ಹತ್ತು  ಅವತಾರಗಳಷ್ಟೇ ಅಂತ  ಅಂದು  ಕೊಂಡಿದ್ದೆವು . ಪ್ರತಿ  ಅವತಾರದ  ಕತೆ  ಬರೆಯುತ್ತಾ  ಹೋದಾಗ , ತಿಳಿದದ್ದು ವೇದ , ಪುರಾಣಗಳಲ್ಲಿ , ವಿಷ್ಣುವಿನ 35ಕ್ಕೂ  ಅವತಾರಗಳಿವೆ  ಅಂತ . 

"ದಶಾವತಾರ " ಸರಣಿಯ ಕೊನೆಯ ಕಂತಿನಲ್ಲಿ , ಇತರ  ಕೆಲವು  ಅವತಾರಗಳ  ಕಿರು  ಪರಿಚಯ.    

View Details

ದಶಾವತಾರದ ಸುಮಾರು ಅವತರಣಿಕೆ ( versions) ಗಳಲ್ಲಿ ಬುದ್ಧ ಹತ್ತು  ಅವತಾರಗಳಲ್ಲಿ  ಒಂದು ಪರಿಗಣಿಸುತ್ತಾರೆ .   ಈ ಕಂತಿನಲ್ಲಿ ಗೌತಮ  ಬುದ್ಧನ  ಕಿರು  ಪರಿಚಯ ಹಾಗೂ ಬುದ್ಧ  ಹುಡುಗನಾಗಿದ್ದ ಸಮಯದ  ಒಂದು  ಪುಟ್ಟ  ಕತೆಯನ್ನು ಹೇಳಲಾಗಿದೆ. 

Photo Courtesy - Pari's Photography

View Details

A special episode about the mysterious Corona Virus ( COVID19) featuring Dr. Prakash and Dr. Sumana Kabbur , where we answer some questions sent by our young listeners. 

ಕೊರೊನ ವೈರಸ್ ಬಗ್ಗೆ ನಮ್ಮ ಪುಟಾಣಿ  ಕೇಳುಗರು  ಕಳಿಸಿದ ಪ್ರಶ್ನೆಗಳಿಗೆ  ಈ ಕಂತಿನಲ್ಲಿ  ಡಾ . ಪ್ರಕಾಶ್  ಹಾಗೂ ಡಾ . ಸುಮನಾ ಕಬ್ಬೂರ್ ಅವರು  ಉತ್ತರಿಸಿದ್ದಾರೆ . 

ಮನೆಯೊಳಗೆ ಪಾಲಿಸಬಹುದಾದ ಮಾದರಿ  ವೇಳಾಪಟ್ಟಿ  ಇಲ್ಲಿದೆ . 

To learn more about the amazing job TrainAndHelp Babies is doing to increase newborn survival rate , visit https://www.trainandhelpbabies.com/. 

View Details

" ದಶಾವತಾರ " ಸರಣಿಯ  ಎಂಟನೆಯ  ಅವತಾರ  ಶ್ರೀ  ಕೃಷ್ಣನ  ಅವತಾರ . ರಾಮ, ಕೃಷ್ಣರ ಕತೆಗಳು  ಪ್ರತಿಯೊಬ್ಬರಿಗೂ ಚಿರ ಪರಿಚಿತ .  ಕೃಷ್ಣನ  ಜೀವನ  ಚರಿತ್ರೆಯನ್ನು  ಸರಳವಾಗಿ , ಚೊಕ್ಕವಾಗಿ ಈ ಕತೆಯಲ್ಲಿ  ಮುಂದಿಡಲಾಗಿದೆ . 

View Details

" ದಶಾವತಾರ " ಸರಣಿಯ ಏಳನೇ ಕಂತು ರಾಮನ ಅವತಾರ . 

ರಾಮಾಯಣ , ಮನೆ  ಮನೆಯ  ದಿನ  ಜೀವನದಲ್ಲಿ  ಹಾಸು  ಹೊಕ್ಕಾಗಿರುವ  ಮಹಾ  ಕಾವ್ಯ . ದೇವರ ಮನೆಯ  ಪೂಜೆಯಿಂದ  ಹಿಡಿದು , ಕುಳಿತಾಗೊಂದು ಸಲ "ರಾಮ ರಾಮ " ಅನ್ನುವ  ಅಜ್ಜಿಯರ ತನಕ , ರಾಮ ಸೀತೆಯರು ನಮ್ಮ  ಜೀವನದ ಭಾಗವಾಗಿ  ಬಿಟ್ಟಿದ್ದಾರೆ . !

ಅಷ್ಟು ದೊಡ್ಡ  ಕತೆಯನ್ನು  8 ನಿಮಿಷದಲ್ಲಿ ಸರಳವಾಗಿ ಹೇಳುವ ಪುಟ್ಟ  ಪ್ರಯತ್ನ  ಈ ಕತೆ .   

View Details

" ದಶಾವತಾರ " ಸರಣಿಯಲ್ಲಿ  ಆರನೆಯ  ಅವತಾರ ಪರಶುರಾಮನ ಅವತಾರ .  ಪರಶುರಾಮ ಅತಿ  ಪರಾಕ್ರಮಿ . ಬ್ರಾಹ್ಮಣನಾಗಿದ್ದೂ , ಕ್ಷತ್ರಿಯರಿಗೆ ಸಿಂಹ ಸ್ವಪ್ನನಾಗಿದ್ದ.

ಪರಶುರಾಮನ ಬಗ್ಗೆ  ಸಾಮಾನ್ಯವಾಗಿ ಸಿಗುವ ಕತೆಗಳು ಮಕ್ಕಳಿಗೆ  ಸ್ವಲ್ಪ ಹೆಚ್ಚೇ  ಹಿಂಸೆ ಅನ್ನಿಸಬಹುದು  ಎಂದು , ಪರಶುರಾಮ ಮತ್ತು  ಗಣೇಶನನ್ನು  ಒಳಗೊಂಡ ಅಪರೂಪದ ಒಂದೆರಡು ಕಥೆಗಳನ್ನು  ಸೇರಿಸಿದ್ದೇವೆ .

ಕಥೆ  ಕೇಳಿ , ನಿಮ್ಮ  ಅಭಿಪ್ರಾಯ , ಅನಿಸಿಕೆಗಳನ್ನು kelirondu@gmail.com ಗೆ  ಕಳಿಸಿ . 

View Details

"ದಶಾವತಾರ " ಸರಣಿಯಲ್ಲಿ ೫ನೇ  ಅವತಾರ  ವಿಷ್ಣು ಕುಳ್ಳ ಬ್ರಾಹ್ಮಣನ  ಅವತಾರದಲ್ಲಿ  ಬಂದು  ಮಹಾ  ದಾನವಂತ  ಅನ್ನೋ  ಅಹಂಕಾರ ದಿಂದ  ಬೀಗುತ್ತಿದ್ದ  ರಾಕ್ಷಸ  ರಾಜ ಬಲಿ ಚಕ್ರವರ್ತಿಯ ಅಹಂಕಾರ  ಮುರಿಯುತ್ತಾನೆ .  ತಪ್ಪಿನ  ಅರಿವಾದ  ಬಲಿ ವಿಷ್ಣುವಿನ  ಕ್ಷಮೆ  ಕೇಳುತ್ತಾನೆ . 

ಅಹಂಕಾರ  ಸಲ್ಲದು ಹಾಗೂ ನಾವು  ಎಷ್ಟೇ  ದೊಡ್ಡವರಿದ್ದರೂ ತಪ್ಪಾದ  ಕೂಡಲೇ ಒಪ್ಪಿಕೊಳ್ಳುವ  ದೊಡ್ಡ  ಗುಣ  ಇರಬೇಕು  ಅನ್ನುವ  ನೀತಿ  ಸಾರುವ  ಈ  ಕತೆ ದಶಾವತಾರದ  ಕತೆಗಳಲ್ಲಿ  ವಿಶಿಷ್ಟವಾದದ್ದು .

View Details

" ದಶಾವತಾರ " ಸರಣಿಯಲ್ಲಿನಾಲ್ಕನೇ  ಅವತಾರ  ನರಸಿಂಹಾವತಾರ

ಹಿರಣ್ಯಕಶಿಪುವಿನ  ಮಗ  ಪ್ರಹ್ಲಾದ , ವಿಷ್ಣುವಿನ  ಮಹಾ  ಭಕ್ತ .

ಹಿರಣ್ಯಕಶಿಪು ಎಲ್ಲ  ಕಡೆ  ತನ್ನನ್ನೇ  ಪೂಜೆ  ಮಾಡಬೇಕು ಅಂತ  ದೇವತೆಗಳನ್ನು , ದೇವರ  ಭಕ್ತರನ್ನು  ಶಿಕ್ಷೆಗೆ ಗುರಿ  ಮಾಡಿದಾಗ ವಿಷ್ಣು ಅರ್ಧ ಸಿಂಹ , ಅರ್ಧ  ಮನುಷ್ಯನ  ಅವತಾರದಲ್ಲಿ  ಬಂದು ರಾಕ್ಷಸನಾದ  ಹಿರಣ್ಯಕಶಿಪುವನ್ನ  ಸಂಹಾರ  ಮಾಡುತ್ತಾನೆ .  

View Details

" ದಶಾವತಾರ " ಸರಣಿಯಲ್ಲಿ ಮೂರನೇ ಅವತಾರ  ವರಾಹಾವತಾರ . 

ವರಾಹ  ಅಂದರೆ   ಕಾಡು ಹಂದಿ  ಎಂದರ್ಥ . ಇಂಗ್ಲಿಷ್ನಲ್ಲಿ  wild boar ಅಂತಲೂ  ಕರೆಯುತ್ತಾರೆ .  ವೈಕುಂಠದ  ದ್ವಾರ  ಪಾಲಕರಾದ ಜಯ  - ವಿಜಯರು  ಭೂಮಿಯ  ಮೇಲೆ  ಹಿರಣ್ಯಾಕ್ಷ  ಹಾಗೂ  ಹಿರಣ್ಯಕಶಿಪು   ಎಂಬ  ರಾಕ್ಷಸರಾಗಿ ಹುಟ್ಟುತ್ತಾರೆ .

" ಯಾವುದೇ  ಮನುಷ್ಯ , ಪ್ರಾಣಿ , ದೇವತೆ , ರಾಕ್ಷಸನಿಂದ  ಸಾವು  ಬಾರದಿರಲಿ " ಬ್ರಹ್ಮನ ವಿಚಿತ್ರ  ವರದಿಂದ ಹಿರಣ್ಯಾಕ್ಷ  ಅಹಂಕಾರದಿಂದ  ಸಿಕ್ಕಿದ್ದನ್ನು   ದ್ವಂಸ  ಮಾಡಿ  ಭೂಮಿ  ದೇವತೆಯನ್ನು  ಪಾತಾಳಕ್ಕೆ ಕರೆದು  ಹೋಗಿಬಿಡುತ್ತಾನೆ . 

ವಿಷ್ಣು ವರಾಹ  ಅವತಾರ  ಧರಿಸಿ  ಭೂಮಿ  ದೇವತೆಯನ್ನ  ಬಿಡಿಸುತ್ತಾನೆ . 

View Details

" ದಶಾವತಾರ " ಸರಣಿಯಲ್ಲಿ ಎರಡನೇ  ಅವತಾರ  ಕೂರ್ಮಾವತಾರ . 

ಕೂರ್ಮ ಅಥವಾ  ಆಮೆ ಭೂಮಿಯನ್ನು ಬೀಳದಂತೆ ಹಿಡಿದಿದೆ ಎಂಬ  ನಂಬಿಕೆ ಹಿಂದೂ , ಬೌದ್ಧ , ಚೀನೀ , ಅಮೆರಿಕಾದ ಇಂಡಿಯನ್ ಸಂಸ್ಕೃತಿಗಳಲ್ಲಿ ಪ್ರಚಲಿತ .   

ದೇವತೆಗಳಿಗೆ  ಸಾವಿಲ್ಲದಂತೆ ಮಾಡುವ  "ಅಮೃತ " ಪಡೆಯೋಕೆ   ರಾಕ್ಷಸರು , ದೇವತೆಗಳಿಬ್ಬರೂ  ಸಮುದ್ರ  ಮಂಥನಕ್ಕೆ ನಿಂತಾಗ , ವಿಷ್ಣು  ಕೂರ್ಮ ಅಥವಾ  ಆಮೆಯ  ರೂಪದಲ್ಲಿ ಬಂದು  ದೇವತೆಗಳಿಗೆ  ಅಮೃತ ಸಿಗುವ  ಹಾಗೆ  ಮಾಡುತ್ತಾನೆ .  

View Details

ಭಾರತೀಯ ಸಂಸ್ಕೃತಿಯ ಮಹಾನ್ ಅಸ್ತಿ ನಮ್ಮ ವೇದ-ಪುರಾಣಗಳು . ಅದರಲ್ಲೂ ವಿಷ್ಣುವಿನ ದಶಾವತಾರಗಳು ಕೆಟ್ಟದ್ದನ್ನು ಕೆಡವಿ ಒಳ್ಳೆಯದು ಒಂದಲ್ಲ ಒಂದು ರೂಪದಲ್ಲಿ ಬಂದೆ ಬರುತ್ತದೆ ಎನ್ನುವ ನಂಬಿಕೆಗೆ ಇಂಬು ಕೊಡುತ್ತವೆ .

ಮುಂದಿನ ಕೆಲವು ವಾರದಲ್ಲಿ , ಈ ದಶಾವತಾರದ ಕತೆಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತರುವ ಪ್ರಯತ್ನ ನಮ್ಮ ತಂಡ ಮಾಡುತ್ತಿದೆ .

ದಶಾವತಾರದ ಮೊದಲನೇ ಅವತಾರವೇ ಮತ್ಸ್ಯಾವತಾರ . ಮನುಷ್ಯ ಪೀಳಿಗೆಯ ಜ್ಞಾನವೆಲ್ಲವೂ ಅಡಗಿದ್ದ ವೇದಗಳನ್ನೇ ಕದಿಯಲು ಹೊರಟಿದ್ದ ಹಯಗ್ರೀವನೆಂಬ ರಾಕ್ಷಸನಿಗೆ ಬುದ್ದಿ ಕಲಿಸಲು ವಿಷ್ಣು ಮೀನಿನ ವೇಷದಲ್ಲಿ ಬಂದ ಎಂದು ಮತ್ಸ್ಯಪುರಾಣ ಹೇಳುತ್ತದೆ .

ಮೂಲ: ಅಮರ ಚಿತ್ರಕಥಾ ಪುಸ್ತಕಗಳು

ಉಚಿತವಾಗಿ ಕಥೆಗಳನ್ನು ಕೇಳಲು ಮಿಂದಾಣ - http://kelirondukatheya.org

Subscribe : https://podcasts.google.com/?feed=aHR0cDovL2tlbGlyb25kdWthdGhleWEub3JnL3Jzcw

ಹೊಸ ಕಥೆಗಳಿಗೆ Whatsapp ಗುಂಪಿಗೂ ಸೇರಬಹುದು: https://chat.whatsapp.com/GsWybXllVFC6INaXFcNSnQ

Background :

Mesmerize by Kevin MacLeod is licensed under a Creative Commons Attribution license (https://creativecommons.org/licenses/by/4.0/)

Source: http://incompetech.com/music/royalty-free/index.html?isrc=USUAN1500005

Artist: http://incompetech.com/

View Details

ಮಕ್ಕಳ ಕಲ್ಪನಾಶಕ್ತಿ ಯನ್ನು ಕೆರಳಿಸಲು 20 ಮೋಜಿನ ಪ್ರಶ್ನೆಗಳು

ಮಕ್ಕಳನ್ನು  ಮಾತಾಡಿಸುವಾಗ , ಯಾವ  ಶಾಲೆಗೇ ಹೋಗುತ್ತೀ , ಎಷ್ಟು  ಮಾರ್ಕ್ಸ್ ತಗೊಂಡಿದ್ದೀ ಅಂತಹ ಪ್ರಶ್ನೆಗಳು  ಸರ್ವೇ ಸಾಮಾನ್ಯ . ಮುಂದಿನ ಸಲ ಮಕ್ಕಳ ಜತೆ  ಮಾತಾಡೋ ಅವಕಾಶ ಸಿಕ್ಕಾಗ ಈ ಕೆಳಗಿನ ಪ್ರಶ್ನೆಗಳನ್ನು ಕೇಳೋಕೆ  ಪ್ರಯತ್ನ ಮಾಡಿ . ಅವರ ಉತ್ತರಗಳು ಅವರ ಯೋಚನಾ ಲಹರಿ , ವ್ಯಕ್ತಿತ್ವ್ , , ಕುತೂಹಲ, ಆಸಕ್ತಿಗಳನ್ನೂ ಕೂಡ ಬಿಚ್ಚಿಡುತ್ತವೆ. ಎಲ್ಲಕ್ಕಿಂತ  ಹೆಚ್ಚಾಗಿ , ಪ್ರತಿಯೊಂದು ಮಗುವಿನೊಳಗಿರುವ ವಿಶೇಷತೆಯನ್ನ ಹೊರಗೆ ತರುತ್ತವೆ . 

ನಿಮ್ಮ  ಅನುಭವವನ್ನು   ನಮ್ಮೊಡನೆ ಹಂಚಿಕೊಳ್ಳೋಕೆ  ಮರೆಯಬೇಡಿ ! 

ಇನ್ನೂ  ಕೆಲವು  ಪ್ರಶ್ನೆಗಳು  !

  1. ನಿನಗೆ  ಕನಸು ಕಾಣೋದು  ಅಂದ್ರೆ ಇಷ್ಟಾನ ?  ನಿನ್ನ ಅಚ್ಚುಮೆಚ್ಚಿನ ಕನಸು ಯಾವುದು ?

  2. ನಿನಗೆ ಯಾವ ಕೆಲಸಗಳು ಮಾಡಿದ್ರೆ ಖುಷಿ ಆಗುತ್ತೆ ? 

  3. ನಿನ್ನ ಗೆಳೆಯರು ಹೇಗಿದ್ದಾರೆ ?  ಅವರಿಗೆ ಏನು ಮಾಡೋಕೆ ಇಷ್ಟ ?

  4. ಈ ಸದ್ಯ ನಿನಗೆ ಏನು ಬೇಕಾದ್ರೂ ಸಿಗೋದಾದ್ರೆ, ಏನು ಪಡೆಯಲಿ  ಇಷ್ಟ ? ಅದರಿಂದ  ಏನ್ಮಾಡ್ತಿಯಾ  ?

  5. ನಿನ್ನ ಅಚ್ಚು ಮೆಚ್ಚಿನ ಕಾರ್ಟೂನ್ ಯಾವುದು ? ಅದರಲ್ಲಿ  ಯಾವ ಪಾತ್ರ  ನಿನಗೆ  ತುಂಬಾ  ಇಷ್ಟ  ? ಯಾಕೆ  ಇಷ್ಟ  ? 

  6. ನೀನು ಹೊಸ ಉದ್ಯಮ / ಅಂಗಡಿ ಶುರು ಮಾಡೋದಾದ್ರ್ ಯಾವ ಥರ ಉದ್ಯಮ / ಅಂಗಡಿ ಶುರು ಮಾಡ್ತೀಯ ? 

  7. ನಿನಗೆ ಸೂಪರ್ ಮ್ಯಾನ್, ಸ್ಪೈಡೆರ್ ಮ್ಯಾನ್ ಥರ ಸೂಪರ್ ಹೀರೊ ನಿಮಗೆ ಇಷ್ಟಾನ ? ಹಾಗಾದರೇ,  ನೀನು ಸೂಪರ್ ಹೀರೊ ಆಗಿದ್ರೆ, ನೀನು ಯಾವ ಹೆಸರಿಟ್ಟು ಕೊಳ್ತಿದ್ದೆ ? ನಿನಗೆ ಯಾವೆಲ್ಲ  ವಿಶೇಷ ಶಕ್ತಿಗಳು ಬೇಕು?

  8. ನೀನು ಸಮುದ್ರಕ್ಕೆ ಹೋದೆ ಅಂತ ತಿಳಿದುಕೋ . ಎಲ್ಲದ್ದಕ್ಕಿಂತ ಮೊದಲು ಯಾವ ಆಟ ಆಡೋಕೆ ನಿನಗಿಷ್ಟ ?

  9. ನಿನಗೆ ಮನೆಯಲ್ಲಿ ಯಾವ ಗಿಡ ಬೆಳೆಸಲಿಕ್ಕೆ ಇಷ್ಟ ?

  10. .ನಿನ್ಹತ್ತಿರ ಆಟ ಸಾಮಾನುಗಳಿದ್ಯಲ್ಲ , ಅವು ಮಾತಾಡುವಂತಿದ್ದರೆ ಹೇಗಿರ್ತಿತ್ತು ? ಅವು  ಏನು  ಮಾತಾಡ್ತಿದ್ದವು ?

  11. ನಿನ್ಹತ್ತ್ರ ಬೇರೆಯವರಿಗೆ ಸಹಾಯ ಮಾಡೋಕೆ 1000 ರೂಪಾಯಿ ,ಇದ್ರೆ, ಯಾರಿಗೆ / ಏನು / ಯಾವ  ಸಹಾಯ ಮಾಡ್ತೀ ?

  12. ನೀನೆ  ಒಂದು ಪುಸ್ತಕ  ಬರೆದೆ ಅಂತ ಇಟ್ಕೋ .  ಯಾವುದರ ಬಗ್ಗೆ ಪುಸ್ತಕ  ಬರೀತಿಯ ?

  13. ನಿನಗೆ  ಯಾವ ಥರದ  ತಿಂಡಿ ಇಷ್ಟ  ? ನೀನು ನಿನ್ನದೇ  ಹೋಟೆಲ್ ಒಂದು ತೆಗೆದಿದ್ದರೆ , ಏನೇನೊ  ತಿಂಡಿ ಮಾಡ್ತಿಯಾ  ನಿನ್ನ ಹೋಟೆಲ್ ನಲ್ಲಿ . ?

  14. ನಿನ್ಹತ್ರ  ಒಂದು ಇಡೀ ದಿವಸ  ತುಂಬಾ ಚೆನ್ನಾಗಿರೋ  ಕ್ಯಾಮೆರಾ ಇದ್ರೆ , ಯಾವ / ಯಾರ  ಫೋಟೋ ತೆಗೆಯುತ್ತಿ

  15. ನೀನು  ವಿಜ್ಞಾನಿ  ಆಗಿ ಏನಾದ್ರೂ  ಕಂಡು ಹಿಡಿಯಬೇಕು  ಅಂತ ಯೋಚಿಸಿದ್ಯಾ ? ಹಾಗಿದ್ದರೆ , ಏನು  ಕಂಡು ಹಿಡಿಯೋದಕ್ಕೆ ಇಷ್ಟ  ? 

  16. ನಿನಗೆ  ಶಾಲೆ ಗೆ  ಹೋಗಬೇಕಾದ್ದೇ  ಇಲ್ಲ ಅಂತ ಅಂದು  ಕೊಳ್ಳೋಣ . ಆಗ ನೀನು  ಏನು ಮಾಡುತ್ತೀ ?

  17. ನೀನು , ಶಿಕ್ಷಕ , ಅಥವಾ  ಟೀಚರ್ ಆಗಿದ್ದೆ ಅಂದುಕೊಳ್ಳೋಣ . ಆಗ  ಮಕ್ಕಳಿಗೆ , ಏನು ಕಲಿಸಲಿಕ್ಕೆ ಇಷ್ಟ ನಿನಗೆ  ?

  18. ನಿನಗೆ  ಯಾವ ಕಥೆ  ಪುಸ್ತಕ ಇಷ್ಟ  ? ಯಾವ ಪಾತ್ರ ಇಷ್ಟ ?

  19. ನಿನ್ನ ಬಗ್ಗೆ ಯಾರಿಗೂ ಗೊತ್ತಿಲ್ದೆ ಇರೋ ವಿಷ್ಯ ಏನಾದ್ರೂ ನನಗೆ ಹೇಳ್ತಿಯ ?

View Details

ಈ ಕತೆ ಇಂಡೋನೇಷ್ಯಾ ದೇಶದ ಜಾನಪದ ಕತೆಗಳಿಂದ ಆಯ್ದುಕೊಂಡಿದ್ದು .  ಕಳೆದ ಸಲದ “ಸೋಮಾರಿ ಸಿದ್ದ “ ನ ಹಾಗೆ , ಇನ್ನೂಬ್ಬ ಮುಗ್ದ ಮನುಷ್ಯನೊಬ್ಬನ  ಕತೆ . ಮನೆಯಲ್ಲಿ ಕಷ್ಟ ಅಂತ ಇದ್ದೊಂದು ಎಮ್ಮೆಯನ್ನ ಮಾರಿ ಬನ್ನಿ ಅಂತ ಅವನ  ಹೆಂಡತಿ ಕಳಿಸಿದರೆ , ಎಷ್ಟೆಲ್ಲಾ ಅವಾಂತರ ಮಾಡಿಕೊಂಡು ಬಂದ , ಮತ್ತು ಕೊನೆಯಲ್ಲಿ ಆಗಿದ್ದ  ಮೋಸದಿಂದ ಹೇಗೆ ತಪ್ಪಿಸಿಕೊಂಡ ಅನ್ನೋ ಮೋಜಿನ ಕತೆ ಕೇಳೋಣ .

View Details

ದಿನವಿಡೀ ನಿದ್ದೆ ಮಾಡುತ್ತಾ ಕಾಲ  ಕಳೆಯುತ್ತಿದ್ದ ಸಿದ್ದ ರಾತ್ರೋ ರಾತ್ರಿ ಪ್ರಖ್ಯಾತ ಮಂತ್ರವಾದಿ ಅನ್ನಿಸಿಕೊಂಡು ಬಿಟ್ಟ .  !

ತಿಳಿ ಹಾಸ್ಯದಿಂದ ಕೂಡಿದ ಈ ಕತೆ ನಿಮ್ಮನ್ನು ಹಾಗೂ ಮಕ್ಕಳನ್ನು ನಕ್ಕು ನಗಿಸುವುದು ಖಂಡಿತ . 

ಹಾಗೆ , ಕಥೆಯ ಕೊನೆಯಲ್ಲಿ  ಕೇಳಿದ "ಜ್ಞಾನ - ವಿಜ್ಞಾನ - ವಿಸ್ಮಯ " ಅಂಕಣದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿದು ಕಳಿಸೋದನ್ನ  ಮರೆಯಬೇಡಿ !

View Details

ಕನ್ನಡದಾಗ ಭಾಳ  ಉಪ  ಭಾಷಾ  ಇದ್ರೂ  ನಮ್ಮ  ಉತ್ತರ  ಕರ್ನಾಟಕ  ಭಾಷಾದಾಗ ಕಥೆ  ಕೇಳೋ  ಮಜಾನ ಬ್ಯಾರೆ  .  ಅದಕ್ಕಾ ಈ ಸಲದ  ಕತಿ  ಉತ್ತರ ಕರ್ನಾಟಕ ಭಾಷಾದಾಗ  ಹೇಳಿ  ಬಿಟ್ಟೇವಿ . ಕತಿ  ಕೇಳ್ರಿ ,  ಮತ್ತ ನಿಮ್ಮ  ಗೆಳೆಯಂದ್ರಿರಿಗೂ  ಹೇಳ್ರಿ .  ಹಂಗ  ನಿಮಗ ಇನ್ನಷ್ಟು ಉತ್ತರ  ಕರ್ನಾಟಕದ ಕತಿಗಳು  ಕೇಳ್ಬೇಕು  ಅನಸಿದ್ರ , ಯಾವ್ ಕತಿ ಬೇಕು  ಅಂತ  ಬರೆದು ಕಳಿಸ್ರಿ .

ಇದು ನಮ್ಮ  ಹೊಸ ಪ್ರಯತ್ನ ,ನಿಮ್ಮ ಅನಿಸಿಕೆಗಳಿಂದ ನಮಗೆ  ಈ ತರಹದ ಹೊಸ ಪ್ರಯತ್ನ ಗಳನ್ನ ಮಾಡಲು ಸ್ಪೂರ್ತಿ ಸಿಗುತ್ತದೆ .

View Details

ನಾವು ರಜೆಗೆ ಬೇರೆ ಊರಿಗೆ ಹೋಗ ಬೇಕಾದಾಗ ಕಾಡೋ ಚಿಂತೆ "ಮನೆ ಅಷ್ಟು ದಿವಸ ಬೀಗ ಹಾಕಿ ಹೋಗೋದು ಹೇಗಪ್ಪಾ ? " ಅನ್ನೋದು .

ಈ ಕತೆಯಲ್ಲೂ ಕೂಡ ವ್ಯಾಪಾರಕ್ಕಾಗಿ ಬೇರೆ ಊರಿಗೆ ಹೊರಟಿದ್ದ ವಿಷ್ಣುವಿಗೂ ಅದೇ ಚಿಂತೆ . ! . ಈ ಸಮಸ್ಯೆಗೆ ವಿಷ್ಣು ಏನು ಪರಿಹಾರ ಹುಡುಕ್ತಾನೆ ಕೇಳೋಣ ?

ಜ್ಞಾನ - ವಿಜ್ಞಾನ - ವಿನೋದ :

ಮಕ್ಕಳೇ, ಈ ಕತೆಯಲ್ಲಿ ಬಂದಿರೋ ನೇರಳೆ ಮರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ದೊಡ್ಡ ಸ್ಥಾನ ಇದೆ. ಇಂಗ್ಲಿಷ್ನಲ್ಲಿ Black plum ಅಥವಾ Jamun ಅಂತ ಕೂಡ ಕರೀತಾರೆ.ನೇರಳೆ ಹಣ್ಣು ಸಕ್ಕರೆ ಖಾಯಿಲೆ, ಅಥವಾ Diabetes ನಿಯಂತ್ರಣ ಮಾಡೋಕೆ ಹೇಳಿ ಮಾಡಿಸಿದ್ದು ಅಂತ ವಿಜ್ಞಾನಿಗಳು ಹೇಳ್ತಾರೆ.

ನೇರಳೆ ಹಣ್ಣು ತಿನ್ನೋದರಿಂದ ಮತ್ಯಾವ ಖಾಯಿಲೆಗಳು ಕಡಿಮೆ ಆಗುತ್ಯವೆ ಅಂತ ತಿಳಿದು ನಮಗೆ ಬರೆದು ತಿಳಿಸಿ.

ಹಾಗೆ, ಈ ಸಲದ ಕತೆಯಲ್ಲಿ ಎರಡು ಅತಿ ಹಳೆಯ , ಹಾಗೂವ್ ಪ್ರಸಿದ್ಧ ಊರುಗಳ ಪರಿಚಯ ಮಾಡಿಕೊಂಡ್ವಿ - ಪರ್ಷಿಯಾ ಹಾಗೂ ಬನಾರಸ್. ಈ ಊರುಗಳು ಈಗಲೂ ಇವೆ. ಇವುಗಳ ಈಗಿನ ಹೆಸರು ಏನು, ಹಾಗೂ ಈ ಪ್ರದೇಶಗಳು ಏಕೆ ಪ್ರಸಿದ್ಧ ಆಗಿದ್ವು ಅನ್ನೋದನ್ನ ತಿಳಿದು, ನಮಗೆ ಆಡಿಯೋ , ಪತ್ರದ ಮೂಲಕ ತಿಳಿಸ್ತೀರಾ ?

ನಿಮ್ಮ ಕಲಿಕೆಗೆ ಈ ಕೆಳಗಿನ ಮಿಂದಾಣ ( Website) ಗಳು ಸಹಾಯವಾಗಬಹುದು .

https://www.webmd.com/vitamins/ai/ingredientmono-530/jambolan

https://www.acupuncturetoday.com/herbcentral/black_plum.php

https://en.wikipedia.org/wiki/Persian_Empire

https://en.wikipedia.org/wiki/Varanasi

View Details

ನಕ್ಷತ್ರಗಳು ಬಹಳ ಹಿಂದಿನಿಂದಲೂ ಮನುಷ್ಯರನ್ನು ಮೋಡಿ ಮಾಡಿವೆ . ಹೀಗಾಗಿ , ಜನಪದ ದಲ್ಲಿ ಅವುಗಳ ಹುಟ್ಟನ್ನು ವಿವರಿಸೋ ಅನೇಕ ಕತೆಗಳು ಹುಟ್ಟಿಕೊಂಡಿವೆ . ದಕ್ಷಿಣ ಅಮೆರಿಕಾದ ಇಂಕಾ ಜನಾಗದಲ್ಲಿ ಕೂಡ ಈ ಬಗ್ಗೆ ಒಂದು ಆಕರ್ಷಕ ವಿವರಣೆ ಈ ಸಲದ ಕತೆಯಲ್ಲಿ .

ಈ ಕತೆಯ ಮೂಲ :

https://www.folklore.ee/folklore/vol12/inca.htm

https://incadiscover.weebly.com/folk-tales.html

ಜ್ಞಾನ - ವಿಜ್ಞಾನ - ವಿನೋದ ಅಂಕಣದ ಪ್ರಶ್ನೆಗಳು :

  1. ಭೂಮಿಯ ಕತೆ Milkyway ಪುಂಜದಲ್ಲಿ ಯಾವ್ಯಾವ ಗ್ರಹಗಳಿವೆ ?

  2. ಆಕಾಶದಲ್ಲಿರುವ ಗ್ರಹಗಳು ಗಾಳಿಯಲ್ಲಿ ತೇಲುತ್ತಿರೋ ರೀತಿ ಕಾಣಿಸುತ್ತವೆ . ಆದರೂ , ಅವು ಕೆಳಗೆ ಬೀಳೋದಿಲ್ಲ ಯಾಕೆ ?

ನಿಮ್ಮ ಉತ್ತರ , ಮರು ಪ್ರಶ್ನೆಗಳನ್ನು ಆಡಿಯೋ ರಿಕಾರ್ಡಿಂಗ್ ಮೂಲಕ kelirondu@gmail.com ವಿಳಾಸಕ್ಕೆ ಇಮೇಲ್ ಕಳಿಸಿ .

View Details

ಈ ಸಲದ ಕಥೆ ಜಪಾನ್ ದೇಶದ ಜಾನಪದ ಸಂಗ್ರಹದಿಂದ ಆಯ್ದುಕೊಂಡಿದ್ದು .  ಆ ದೇಶದಲ್ಲಿ  ಬೆಳೆಯುವ ಚೆಸ್ಟ್ ನಟ್ ಮರ ನೋಡಲು ಅತಿ ಸುಂದರ . ಮನುಷ್ಯರ ಹಾಗೂ ಮರಗಳ ನಡುವಿನ ಸಂಬಂಧವನ್ನು ಮಕ್ಕಳಿಗೆ ನಾಟುವ ಹಾಗೆ ಈ ಕಥೆ  ಹಿಡಿದಿಡುತ್ತದೆ . 

ಈ ವಾರ ಜ್ಞಾನ - ವಿಜ್ಞಾನ -ವಿನೋದ ಅಂಕಣದ ಪ್ರಶ್ನೆಗಳು - 

  1. ದೋಣಿಗಳನ್ನು ಮಾಡಲು ಮರ / ಕಟ್ಟಿಗೆಯನ್ನ ಏಕೆ  ಉಪಯೋಗಿಸ್ತಾರೆ ? 

  2. ದಿನ ನಿತ್ಯದ  ಓಡಾಟಕ್ಕೆ ದೋಣಿಗಳನ್ನಷ್ಟೇ ಉಪಯೋಗ ಮಾಡೋ ಊರುಗಳ ಬಗ್ಗೆ ತಿಳಿದುಕೊಳ್ಳಿ . ಗೊತ್ತಾದ ಮೇಲೆ, ನಮಗೆ kelirondu@gmail.com ಗೆ  ಬರೆದು  ತಿಳಿಸಿ. 

View Details

ಕಳೆದ ವಾರ ಡಲ್ಲಾಸ್ ನಲ್ಲಿ  ನಡೆದ  ದೀಪಾವಳಿ  ಸಮಾರಂಭದಲ್ಲಿ , "ಕೇಳಿರೊಂದು ಕಥೆಯ " ತಂಡ  ಹಿಂದೆ  ಪ್ರಕಟಿಸಿದ್ದ  " ನಾಸ್ರುದ್ದೀನ್ ಹೊಡ್ಜ  ಮತ್ತು  ಕಿಕ್ಕಿರಿದ ಮನೆ " ಎಂಬ  ಕಥೆಯನ್ನು ನಾಟಕದ  ರೂಪದಲ್ಲಿ ಪ್ರದರ್ಶನ  ನೀಡಿದ್ದರು . 

ಆ ನಾಟಕದ ರಿಕಾರ್ಡಿಂಗ್ ಅನ್ನು  ನಿಮ್ಮೊಡನೆ  ಹಂಚಿಕೊಳ್ತಿದ್ದೇವೆ . 

View Details

ಆಗಸದಲ್ಲಿ  ಹಾರುವ  ಪಾರಿವಾಳಕ್ಕೂ , ಬಿಲದಲ್ಲಿರೋ ಪುಟ್ಟ ಇಲಿಗೂ ಎತ್ತಣ ಗೆಳೆತನ ?  ಬೇಡನೊಬ್ಬ ಪಾರಿವಾಳಗಳನ್ನು ಬಲೆಯಲ್ಲಿ  ಹಿಡಿದಾಗ , ಆ ಪುಟ್ಟ ಇಲಿಯೇ ರಕ್ಷಕನಗುವ ಈ ಕಥೆ , ಪಂಚತಂತ್ರದ ಅತಿ ಜನಪ್ರಿಯ ಕಥೆಗಳಲ್ಲೊಂದು . 

View Details

ದೀಪಾವಳಿಯ ಶುಭಾಶಯಗಳು ಕೇಳುಗರೆಲ್ಲರಿಗೂ .

ವರ್ಷದ ವಿಶೇಷ ಭಾರತೀಯ ಹಬ್ಬಗಳ ಪರಿಚಯ ಕಥೆಗಳ ಮೂಲಕ "ಕೇಳಿರೊಂದು ಕಥೆಯ " ಮಾಡಿಸುತ್ತಿದೆ . ಶಿವರಾತ್ರಿ ಇಂದ ಶುರುವಾಗಿ , ಯುಗಾದಿ , ರಂಜಾನ್ , ಗಣೇಶ ಚತುರ್ಥಿ , ದಸರಾ ಹಬ್ಬಗಳ ನಂತರ ಬರುವುದೇ ದೀಪಾವಳಿ . ಬಹಳಷ್ಟು ಕನ್ನಡಿಗರಿಗೆ , ವರ್ಷದ ಅತಿ ದೊಡ್ಡ ಹಬ್ಬವೂ ಕೂಡ .

ದೀಪಾವಳಿಯ ಹಿಂದಿರುವ ಉಪಕಥೆಗಳ ಪರಿಚಯ ಮಾಡಿಸುತ್ತಲೇ ದೀಪಾವಳಿ ಮಹತ್ವ ವಿವರಿಸುವ ಪುಟ್ಟದೊಂದು ಪ್ರಯತ್ನ ಈ ವಾರದ ವಿಶೇಷ ಕಥೆ .

Source :

Naraka story : https://kathakids.com/mythological-stories-krishna-katha-narakasura-a-diwali-story-cec5714bc363

Bali story : https://www.hindu-blog.com/2009/10/bali-padyami-2009-date.html

ramayana story : https://www.mommyinme.com/diwali-story-for-kids-why-do-we-celebrate-diwali/

Image: https://www.pinterest.com/pin/672514156832684038/?lp=true

View Details

ಕಳೆದ ವರ್ಷ ಮಾಡಿದ್ದ ಈ ಕಥೆ ನಮ್ಮ ಅತಿ ಜನಪ್ರಿಯ ಕಥೆಗಳಲ್ಲೊಂದು.!  

ಟೋಪಿಗಳು ಸಾರ್ ಟೋಪಿಗಳು , ಅಂತ ಕೂಗುತ್ತಾ ಹೊರಟಿದ್ದ ಟೋಪಿ ಮಾರುವವನಿಗೆ, ಮರದಲ್ಲಿದ್ದ ಮಂಗಗಳು ತೊಂದರೆ ಕೊಟ್ಟಾಗ, ಟೋಪಿ ಮಾರುವವ ಸಿಟ್ಟಾಗದೆ, ಚಾಣಾಕ್ಷತನದಿಂದ ನಡೆದುಕೊಂಡ ಕಥೆ.

View Details

ಜಂಭಕೋರ  ದರ್ಜಿ  ( ಬಟ್ಟೆ  ಹೊಲೆಯುವವನು  ) , ಕಲ್ಲಿನ ಕೋಟು ಹೊಲೆಯುವ ರಾಜನ  ಸವಾಲನ್ನು ನಡೆಸಿಕೊಟ್ಟದ್ದು  ಹೇಗೆ  ?  ಇರಾಕ್  ದೇಶದ ಜನಪ್ರಿಯ ಜನಪದ ಕಥೆಗಳಲ್ಲಿ ಈ ಕಥೆಯೂ  ಒಂದು . 

Soundtrack: 

"Odyssey" Kevin MacLeod Licensed under Creative Commons: By Attribution 4.0 http://creativecommons.org/licenses/by/4.0/

View Details

ನವರಾತ್ರಿ , ದಸರಾ ಅಂದ ಕೂಡಲೇ ಕನ್ನಡಿಗರಿಗೆ ನೆನಪಾಗುವುದು  ಮೈಸೂರು ದಸರಾ ಹಾಗೂ  ಅಂಬಾರಿ ಹೊತ್ತ ಆನೆ . ಶಿಷ್ಟರ ದೂಷಣೆ ಮಾಡುವ ದುಷ್ಟರಿಗೆ  ಶಿಕ್ಷೆ ತಪ್ಪಿದ್ದಲ್ಲ  ಅನ್ನುವ ಸಂದೇಶ  ಸಾರುವ ನವರಾತ್ರಿಗೆ ಪುರಾಣದಲ್ಲಿ  ಬಹಳಷ್ಟು ಉಪಕಥೆಗಳಿವೆ .   

ಅವುಗಳಲ್ಲಿ ರಾಮಾಯಣ , ಮಹಾಭಾರತಗಳಿಂದ  ಆಯ್ದ  ಮೂರು ಜನಪ್ರಿಯ ಕಥೆಗಳನ್ನು ಈ ವಾರ ಕೇಳೋಣ  . 

Picture Credit: https://metrosaga.com/10-key-attractions-of-mysore-dasara/mysuru-dasara-cover/

View Details

ಆಫ್ರಿಕಾದ ಸಲ್ಕಾಟ ಆಮೆಗಳು ( Sulcata Tortoise) ಅತಿ ದೊಡ್ಡ ಆಮೆ ಜಾತಿಗಳಲ್ಲಿ  ಒಂದು .  ಸಹಾರಾ ಮರಳುಗಾಡಿನಲ್ಲಿ ಬೆಳೆಯುವ ಕುರುಚಲು ಗಿಡ, ಹುಲ್ಲುಗಳನ್ನು ತಿಂದು 3 ಅಡಿಗೂ ಹೆಚ್ಚು ಉದ್ದ , 100 ಕೆಜಿ ಗೂ ಹೆಚ್ಚು ತೂಕ ಇರುತ್ತವೆ .  

ಸಾಧಾರಣ ನೀರಿನ ಹತ್ತಿರ ಇರುವ ಆಮೆಗಳು ಮರುಭೂಮಿಯ ಹತ್ತಿರ ಹೇಗೆ ಬಂದವು ಅನ್ನುವುದಕ್ಕೆ ನೈಜೀರಿಯಾದ ಬುಡಕಟ್ಟು ಜನರು ಈ ಕಥೆ ಹೇಳುತ್ತಿದ್ದರಂತೆ . 

ಪ್ರಕೃತಿಯಲ್ಲಿ ಕಾಣ ಸಿಗುವ ಗಿಡ , ಪ್ರಾಣಿ , ಪಕ್ಷಿ , ಕಲ್ಲು , ಗುಡ್ಡ  ಹೀಗೆ ಪ್ರತಿಯೊಂದರ ಇರುವಿಕೆಗೂ  ಕಥೆಗಳ ಮೂಲಕ ತಮ್ಮದೇ ರೀತಿಯಲ್ಲಿ ವಿವರಣೆ ಹೆಣೆಯುವ ಬುಡಕಟ್ಟು ಜನರ ಕಲ್ಪನೆ ಅದ್ಭುತ .  

View Details

ನೀವು ಕೇಳಿದ್ದೆಲ್ಲಾ ಕೊಡೊ ಜಿನೀ ಕತೆ ಕೇಳಿರ್ತೀರಿ .  ಆದರೆ , ಈಗಿನ ಅಲೆಕ್ಸಾ , ಗೂಗಲ್ ಹೋಮ್ ತರಹ ಗೊತ್ತಿಲ್ಲದೇ ಇರೋ ರಹಸ್ಯಗಳನ್ನು ನೀವು ಕೇಳದೆಯೇ ಹೇಳುವ ಮಾಯಾ ಶಂಖದ ವಿಚಾರ ಕೇಳಿದ್ದೀರಾ ? 

ಈ ವಾರದ ಕಥೆಯಲ್ಲಿ , ಅಂತಹ ಶಂಖ ಸಿಕ್ಕ ಮಿದೋರಿ ಅನ್ನೋ ಮೀನುಗಾರ , ಏನೆಲ್ಲಾ ಮಾಡಿದ ಅನ್ನೋ ಕಥೆ ಕೇಳೋಣ ? 

View Details

ಗಾದೆಗಳು , ನಮ್ಮ ಪೂರ್ವಜರು ಬಿಟ್ಟು ಹೋಗಿರೋ ಅಮೂಲ್ಯ ಆಸ್ತಿ . ಅವುಗಳನ್ನು ನಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ದಾರಿ ತೋರುಕ ( sign post ) ಗಳಾಗಿ ಉಪಯೋಗಿಸಿಕೊಳ್ಳಬೇಕೇ ವಿನಃ , ಅಕ್ಷರಃ ಪಾಲಿಸಿದರೆ ಕೆಲವು ಸಲ ಅವಾಂತರ ಆಗೋ ಸಂಭವ ಇರುತ್ತದೆ . 

" ಎಲ್ಲರನ್ನೂ ಒಂದೇ ಥರ ಕಾಣಬೇಕು  " ಅನ್ನೋ ಗಾದೆಯನ್ನ ಅಕ್ಷರಶಃ ಪಾಲಿಸಿ ಅವಾಂತರಕ್ಕೆ ಸಿಕ್ಕಿಕೊಂಡ ಋಷಿಯ ಕತೆ ಈ ವಾರದ ವಿಶೇಷ . 

View Details

" ಕೇಳಿರೊಂದು ಕಥೆಯ " ತಂಡದ ಎರಡನೇ ವರ್ಷದ ಮೊದಲನೇ ಕಥೆ ಆಫ್ರಿಕಾ ಖಂಡದ ಒಂದು ಜನಪ್ರಿಯ ಜಾನಪದ ಪಾತ್ರ ಅನಾಂಸಿ ಅನ್ನೋ ಜೇಡರ ಹುಳುವಿನದ್ದು .  ಅನಾನ್ಸಿಯ ಕುರಿತಾದ ಬಹಳಷ್ಟು ಕಥೆಗಳು ಆಫ್ರಿಕಾದ ದೇಶಗಳಲ್ಲಿ ಪ್ರಚಲಿತ ಇವೆ.  ಸಾಧಾರಣವಾಗಿ ನೀತಿ ಕಥೆಗಳಲ್ಲಿ ಕಂಡು ಬರುವ ಅನಾಂಸಿ , ಬಹಳ ತುಂಟ ಹುಳು .  

ಈ ಜೇಡದ ಒಂದು ಕಥೆ "ಮಾತನಾಡುವ ಕಲ್ಲಂಗಡಿ " ಹಣ್ಣಿನ ಬಗ್ಗೆ .  ಕಲ್ಲಂಗಡಿ ಹಣ್ಣು ತಿನ್ನೋಕೆ  ಹೋಗಿ , ಹಣ್ಣಿನಲ್ಲೇ  ಸಿಕ್ಕು , ಮಾತನಾಡುವ ಹಣ್ಣಿನ ಸೋಗು ಹಾಕಿಕೊಂಡು ಆ ರಾಜ್ಯದ ರಾಜನ ವರೆಗೂ ಹೋಗಿ , ಮತ್ತೆ  ಆ ತೋಟಕ್ಕೆ ವಾಪಸ್ ಆಗೋ ನಕ್ಕು ನಗಿಸುವ ಈ ಕಥೆ ನೀತಿ ಕಥೆಯೂ ಹೌದು

.  

View Details

ಕೇಳುಗರೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು . 

ಗಣೇಶ ಹಬ್ಬ ಅಂದ ಕೂಡಲೇ ಹಲವು ಮನೆಗಳಲ್ಲಿ ಶಮಂತಕ ಮಣಿಯ ಕಥೆ ಕೇಳುವ ಪರಿಪಾಠ ಇದೆ.  ಈ ಕಥೆಯನ್ನು ಈಗ ನಮ್ಮ  ತಂಡದವರು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಮುದ್ದಾಗಿ ತಿಳಿಸಿಕೊಟ್ಟಿದ್ದಾರೆ .  

ಕೇಳಿ , ನಿಮ್ಮ ಮನೆಯವರಿಗೂ ಕೇಳಿಸಿ . 

View Details

Sixth and last episode of award winning biography of the world famous Dasara elephant - Balarama.

Narrated by the author D.K Bhaskar, this episode covers these two chapters of the book - ಜಂಬೂ ಸವಾರಿ and ಬಲರಾಮ ಮತ್ತವನ ಮಗ

In this episode, Balarama displays his grace and strength by carrying the howdah of Goddess Chamundeshwari during the Dasara procession for the first time. He is adored by millions of watching people.

He returns to the camp after the procession and the story moves on to Balarama meeting his future partner and bearing a son.

As the last part of the story, Bhaskar narrates the inspiration behind this story book and urges listeners to think of elephants as a symbol of human survival itself.

This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) .

ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ .

ಅಧ್ಯಾಯಗಳು :

  1. ಜಂಬೂ ಸವಾರಿ

  2. ಬಲರಾಮ ಮತ್ತವನ ಮಗ

View Details

Fifth episode of award winning biography of the world famous Dasara elephant - Balarama.  Narrated by the author D.K Bhaskar, this episode covers these two chapters of the book - ದಸರಾ ತಾಲೀಮು and ಮೈಸೂರಿನತ್ತ ಪಯಣ .   

In this episode, Balarama gradually adapts to Elephant camp, and starts training  for Dasara.  He heads towards Mysore and is surprised to see so many people cheering for him. 

This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) . 

ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ . 

ಅಧ್ಯಾಯಗಳು : 

  1. ದಸರಾ ತಾಲೀಮು

೨. ಮೈಸೂರಿನತ್ತ ಪಯಣ

View Details

Fourth episode of award winning biography of the world famous Dasara elephant - Balarama.  This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) . 

Narrated by the author D.K Bhaskar, this episode covers these two chapters of the book - ಬಲರಾಮನ ಹತಾಶೆ  and ದ್ರೋಣ , ಕೃಷ್ಣರ ಭೇಟಿ .   

In this episode, Balarama overcomes his challenges to adapt to Humans and becomes best friends with Sannappa, his trainer.  He also meets his friend elephants - Drona and Krishna - and learns of their experience, which readies him for this future. 

ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ . 

ಅಧ್ಯಾಯಗಳು : 

  1. ಬಲರಾಮನ ಹತಾಶೆ

  2. ದ್ರೋಣ , ಕೃಷ್ಣರ ಭೇಟಿ

View Details

Third episode of award winning biography of the world famous Dasara elephant - Balarama.  This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) . 

Narrated by the author D.K Bhaskar, this episode covers these two chapters of the book - ಬಲರಾಮನನ್ನು ಅರಸುತ್ತಾ  and ಸೆರೆ ಸಿಕ್ಕ ಬಲರಾಮ .   

In this episode, Balarama and his cousins lose Chikki elephant. In the sadness, Balarama ventures into Kakanakote forest and is captured by Humans.  The episode ends with  Balarama meeting his trainer , Sannappa , for the first time. 

ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ . 

ಅಧ್ಯಾಯಗಳು : 

  1. ಬಲರಾಮನನ್ನು ಅರಸುತ್ತಾ

  2. ಸೆರೆ ಸಿಕ್ಕ ಬಲರಾಮ

View Details

Second episode of award winning biography of the world famous Dasara elephant - Balarama.  This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) . 

Narrated by the author D.K Bhaskar, this episode covers these two chapters of the book - ಭಲೇ ಗಂಡು  ಬಲರಾಮ and ಮನುಷ್ಯರು ಮತ್ತು ಖೆಡ್ಡಾ .  

Follow along as Chikki Elephant explains to Balarama and his counsins about mythological stories about Elephants and continue on to explain about Humans. 

ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ಮೂರು , ನಾಲ್ಕನೇ  ಅಧ್ಯಾಯಗಳ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ . 

ಅಧ್ಯಾಯಗಳು : 

  1. ಭಲೇ ಗಂಡು  ಬಲರಾಮ

  2. ಮನುಷ್ಯರು ಮತ್ತು ಖೆಡ್ಡಾ

View Details

First episode of award winning biography of the world famous Dasara elephant - Balarama.  This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) . 

Narrated by the author D.K Bhaskar, this episode covers the first two chapters of the book - ಆನೆ ಧರೆಗಿಳಿದಿದ್ದು and ಚಿಕ್ಕಿಯ ಮನೆಪಾಠ . 

Follow along as Chikki Elephant explains to Balarama and his friends about a tale about how elephants came to be on earth and continue on to Balarama's naughty behavior with his friends. 

ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ಮೊದಲೆರೆಡು ಅಧ್ಯಾಯಗಳ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ . 

ಅಧ್ಯಾಯಗಳು : 

  1. ಆನೆ ಧರೆಗಿಳಿದಿದ್ದು 

  2. ಚಿಕ್ಕಿಯ ಮನೆಪಾಠ 

View Details

ನಮ್ಮ ಸಂಗ್ರಹದಿಂದ ಆಯ್ದ ಕುತೂಹಲ , ಸಾಹಸಗಳ ಬಗ್ಗೆ ೩ ಕತೆಗಳು 

  1. ಸಿಂಹದ ಮೀಸೆ  - ಇಥಿಯೋಪಿಯಾದ ಜನಪದ ಕತೆ . 

  2. ಕಮೀಲ ಹಾಗೂ ಕಳೆದು ಹೋದ ಸೂರ್ಯ  - ದಕ್ಷಿಣ ಅಮೆರಿಕಾದ ಜನಪದ ಕತೆ 

  3. ಚಾಕಲೇಟ್ ಕತೆ  - ಮತ್ತೊಂದು ದಕ್ಷಿಣ ಅಮೆರಿಕಾದ ಕತೆ .

View Details

"ತಾಳಿದವನು ಬಾಳಿಯಾನು " ಅನ್ನೋ ಗಾದೆ ಕೇಳಿರಬೇಕಲ್ಲ .  ಅವಸರ ಮಾಡಿದ್ರೆ ಕೆಲಸ ಹಾಳಾಗುತ್ತೆ ಅನ್ನೋದನ್ನ ಹೇಳೋ ಎರಡು ಕತೆಗಳ ಬೋನಸ್ ಕಂತು ನಮ್ಮ ಕತೆಗಳ ಸಂಗ್ರಹದಿಂದ . 

ಮೊದಲನೇ ಕತೆ "ಬಾಯಿಬಡುಕ  ಆಮೆ ಮತ್ತು ಬಾತುಕೋಳಿಯ ಕತೆ " ಯಲ್ಲಿ , ನೀರಿಲ್ಲದೆ ಬಳಲಿದ್ದ ಆಮೆ, ಕಷ್ಟದ ಸಮಯದಲ್ಲೂ ತನ್ನ ಬಾಯಿ ಬಡುಕ ತನವನ್ನ ತೋರಿಸಿದ ಪರಿಣಾಮ ಏನಾಯ್ತು ಅನ್ನೋದನ್ನು  ಕೇಳೋಣ . 

ಎರಡನೇ ಕತೆ " ಚಿನ್ನದ ಮೊಟ್ಟೆಯಿಡುವ ಬಾತುಕೋಳಿ " ಯಲ್ಲಿ , ದಿನಕ್ಕೊಂದು ಚಿನ್ನದ ಮೊಟ್ಟೆ ಇಡುತ್ತಿದ್ದ ಬಾತುಕೋಳಿಯನ್ನು ಇನ್ನೂ ಜಾಸ್ತಿ ಮೊಟ್ಟೆ ಪಡೆಯೋ ದುರಾಸೆಯಿಂದ ಬಾತುಕೋಳಿಯನ್ನೇ ಕಳೆದುಕೊಂಡ ರೈತನೊಬ್ಬನ ಕತೆ ಕೇಳೋಣ . 

ಎಂದಿನ ಹಾಗೆ , ನಿಮ್ಮ ಅಭಿಪ್ರಾಯಗಳನ್ನ kelirondu@gmail.com ಗೆ ಕಳಿಸಿ. 

View Details

ನಮ್ಮ ಸರಣಿ -೧ ರಲ್ಲಿ ಪ್ರಕಟವಾಗಿದ್ದ ಎರಡು ಜನಪ್ರಿಯ ಕಥೆಗಳ Combo. 

  1. ನರಿ ಹಾಗೂ ಮೇಕೆ ಮರಿಯ ಕಥೆ 

  2. ನರಿ ಹಾಗೂ ಡೊಳ್ಳಿನ ಕಥೆ . 

View Details

ಮಕ್ಕಳಲ್ಲಿ ಮಾತಾನಾಡುವಿಕೆಯ ತೊಂದರೆಗಳು ಅನ್ನೋ ವಿಷಯದ ಬಗ್ಗೆ ಲಾಸ್ ಏಂಜೆಲ್ಸ್ ನಲ್ಲಿ ವಾಕ್ ತಜ್ಞೆಯಾಗಿರುವ ಡಾ. ಅರ್ಚನಾ ಗುರುಪ್ರಸಾದ್ ಅವರೊಡನೆ ನಡೆದ ಸಮಾಲೋಚನೆಯ ಮುದ್ರಿಕೆ . 

ಈ ಸಮಾಲೋಚನೆಯಲ್ಲಿ , ಮಕ್ಕಳಲ್ಲಿ ಮಾತು ಹಾಗು ಕೇಳುವಿಕೆಯ ಸಮಸ್ಯೆಗಳು , ಅದರಿಂದ ಕಲಿಕೆಯ ಮೇಲೀನ ಪ್ರಭಾವ , ಮಕ್ಕಳು ಮಾತನಾಡುವುದನ್ನು ಪ್ರೇರೇಪಿಸಲು ತಂದೆತಾಯಂದಿರು ಮಾಡಬಹುದಾದ ಸುಲಭ ವಿಧಾನಗಳು ಇತರೆ ವಿಷಯಗಳ ಬಗ್ಗೆ ಮಾತನಾಡಿದೆವು . 

ಈ ಸಂದರ್ಶನದ ಬಗ್ಗೆ ಪ್ರಶ್ನೆಗಳಿದ್ದಲ್ಲಿ kelirondu@gmail.com ಒಂದು ಮಿಂಚೆ ಕಳಿಸಿ . 

We talked to Dr.Archana Guruprasad, who practices Speech pathology in Los Angeles Area schools , about speech difficulties in children, how to encourage early speech and other learning techniques in this episode. 

Please leave us a review on how you felt about this episode on our facebook page https://fb.me/keiirondukatheya or email us at kelirondu@gmail.com 

View Details

ಜೂನ್ ಮೊದಲ ವಾರ  ಪ್ರಪಂಚದೆಲ್ಲೆಡೆ ಮುಸ್ಲಿಂ ಭಾಂದವರು  ಈದ್ ಮಿಲಾದ್ ಹಬ್ಬ ಆಚರಣೆ ಮಾಡ್ತಾರೆ .   

ದೈಹಿಕ ಐಚ್ಚೆಗಳನ್ನು ನಿಯಂತ್ರಿಸಿ  ಪ್ರಾರ್ಥನೆ , ದಾನ ಮುಂತಾದ ಕಾರ್ಯಗಳ ಮೂಲಕ ಮನಸ್ಸನ್ನು ಶುದ್ಧವಿರಿಸಿಕೊಳ್ಳುವ ಹಿನ್ನಲೆಯಿರುವ ಈ ಹಬ್ಬವನ್ನು  ಪುಟಾಣಿ ಕೇಳುಗರಿಗೆ ಅರ್ಥವಾಗುವಂತೆ ತಲುಪಿಸುವ ಪುಟ್ಟ ಪ್ರಯತ್ನ ಇದು . 

ಎಲ್ಲ ಮುಸ್ಲಿಂ ಭಾಂದವರಿಗೂ  ಈದ್ ಹಬ್ಬದ ಶುಭಾಶಯಗಳು . 

View Details

ಹಾಸ್ಯ ಮಿಶ್ರಿತ ಕತೆಗಳ ಮಾಲಿಕೆಯಲ್ಲಿ ಇದು ನಮ್ಮ ಕೊನೆಯ ಕತೆ .  

ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ  ? 

ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ  . 

View Details

" ಬಿಳಿ ಆನೆಯ ಕತೆ " , ಭಾರತೀಯ ಜನಪದದಲ್ಲಿ ವಿವಿಧ ಆವೃತ್ತಿಗಳಲ್ಲಿ ಜನಪ್ರಿಯವಾಗಿರುವ ಕತೆ.  ಹಾಸ್ಯ , ಪುರಾಣ ಮಿಶ್ರಿತವಾಗಿರುವ ಈ ಕತೆ ಮಕ್ಕಳಿಗೆ ಬಹಳ ಇಷ್ಟ .  ಶಂಕರ , ಅನ್ನುವ ಮುಗ್ಧ ರೈತ , ಸ್ವರ್ಗದಿಂದ ಇಳಿದು ಬಂದ ಆನೆಯ ಬಾಲ ಹಿಡಿದು ಸ್ವರ್ಗಕ್ಕೆ ಒಂದು ಟ್ರಿಪ್ ಹೊಡೆದಿದ್ದೆ ತಡ , ಒಬ್ಬರಿಂದ ಇನ್ನೊಬ್ಬರಿಗೆ ಆ ಸುದ್ದಿ ಹರಡಿ ದೊಡ್ಡ ಹಿಂಡೇ ಸ್ವರ್ಗಕ್ಕೆ ಹೊರಡಲು ಸಿದ್ಧವಾಗುತ್ತೆ . ಮುಂದೆ ಆಗುವ ಅವಾಂತರವನ್ನು ಅಪರ್ಣ ನರೇಂದ್ರ ಅವರ ಧ್ವನಿಯಲ್ಲಿ ಕೇಳಿ . 

This story is a hilarious adaptation of an innocent farmer making a trip to heaven by holding the tail of the white elephant visiting his farm.  Listen to the hilarious sequence of events that  happens when he tells of this experience to his friends.  

View Details

Sometimes the feeling of previlege can make us lose empathy.  It can affect kings and emperors too, as we see in this story.   

As we see in this story, when Akbar shows his power on a helpless Saint, it takes a few reminders to realize all humans are same. 

ಅಧಿಕಾರ, ಅಹಂಕಾರಗಳು  ಎಂತವರನ್ನೂ ಕರುಣೆ , ಮರ್ಯಾದೆ ಕಳೆದುಕೊಂಡವರನ್ನಾಗಿ ಮಾಡಬಲ್ಲದು . ಇಡೀ ಉತ್ತರ ಭಾರತದ ರಾಜನಾಗಿದ್ದ ಅಕ್ಬರನನ್ನೊ ಕೂಡ .  

ಧ್ಯಾನದಲ್ಲಿದ್ದ ಸನ್ಯಾಸಿಯನ್ನು ಕೀಳಾಗಿ ಕಂಡ ಅಕ್ಬರನಿಗೆ ಬೀರಬಲ್ಲ ಎಲ್ಲ ಮನುಷ್ಯರೂ ಒಂದೇ ಅನ್ನೋದನ್ನು ಸರಳ ಪ್ರಶ್ನೆಗಳಲ್ಲಿ ಮನವರಿಕೆ ಮಾಡಿ ಕೊಟ್ಟಿದ್ದನ್ನು ಈ ಕತೆಯಲ್ಲಿ ಕೇಳೋಣ . 

View Details

"Have more than you show, Speak less than you know" ಅನ್ನೋ ಇಂಗ್ಲಿಷ್ ಗಾದೆ ನೀವು ಕೇಳಿರಬಹುದು ಅಲ್ಲವೆ ?  ನಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡುವುದು ನಮ್ಮ ಸಮಾಜಕ್ಕೆ ಅಂಟಿದ ಪಿಡುಗು .  ಹೋಲಿಕೆಯಿಂದ ಕೆಲವು ಸಲ ಖುಷಿ ಸಿಗಬಹುದಾದರೂ ಬಹಳ ಸಲ ದುಃಖವೇ ಹೆಚ್ಚು . 

ಈ ಸಲದ ಕತೆಯಲ್ಲೂ ಬೀರ್ಬಲ್ ನ ಬುದ್ದಿವಂತಿಕೆ ಹಾಗು ಜನಪ್ರಿಯತೆಯ ಬಗ್ಗೆ ಅಸೂಯೆಯಿಂದ ಸೈನಿಕನೊಬ್ಬ ಅಕ್ಬರ್ ನ ಹತ್ತಿರ ಹೋಗುತ್ತಾನೆ . ಅಕ್ಬರ್ ಸೈನಿಕನಿಗೆ ಬೀರ್ಬಲ್ ನ ಕಾರ್ಯಕ್ಷಮತೆ ಏಕೆ ಉತ್ತಮ ಅನ್ನೋದನ್ನ ತೋರಿಸಲು ಒಂದು ಸಣ್ಣ ಪರೀಕ್ಷೆ ಒಡ್ಡುತ್ತಾನೆ . ಕೊನೆಯಲ್ಲಿ ಸೈನಿಕನಿಗೆ ಅರಿವಾಗುತ್ತದೆ . 

View Details

ಮಕ್ಕಳ ಥರ ಆಡೋದು ಅನ್ನೋದನ್ನ ಎಲ್ರೂ ಕೇಳಿರ್ತೀವಿ ಅಲ್ವೇ ? ಸಣ್ಣ ವಿಷಯಕ್ಕೆ ಹಠ ಮಾಡೋದು , ಅಳೋದು , ಇತ್ಯಾದಿ .  ಈ ರೀತಿ ಮಕ್ಕಳ  ವರ್ತನೆ ದೊಡ್ಡವರನ್ನಂತೂ ಭಾರಿ ಪೇಚಾಟಕ್ಕೆ ಸಿಲುಕಿಸುತ್ತೆ . ಒಂದು ಕಡೆ ಸಿಟ್ಟು , ಇನ್ನೊಂದು ಕಡೆ ಗೊಂದಲ ಹೀಗೆ ದೊಡ್ಡವರ ವರ್ತನೆಯೂ ಮಕ್ಕಳ ವರ್ತನೆಯಿಂದ ಏರು ಪೇರಾಗುತ್ತೆ . ಮಕ್ಕಳ ಹಠ ಅಂದ್ರೆ ತೀರಾ ಕೇವಲ ಅಂದುಕೊಂಡಿದ್ದ ಅಕ್ಬರನಿಗೆ ಬೀರ್ಬಲ್ ಹೇಗೆ ಪಾಠ ಕಳಿಸಿದ ಅಂತ ಈ ಸಲ ಕತೆಯಲ್ಲಿ ಕೇಳೋಣ  ? 

View Details

How much would you pay for a snack ?  10 Rupees ? 100 Rupees ? Now how much would you pay for the smell of the snack ? Sounds ridiculous right ? This is what happened to a man who was passing by a snack store and stopped because of the wonderful smell coming out of that store.  Lets listen to how Hodja helped him pay the price when the store owner demanded money for 'smelling' from his snack shop. 

ಅಂಗಡಿಯಲ್ಲಿ ಚಕ್ಕುಲಿ ಕೊಂಡು ಕೊಂಡ್ರೆ ಎಷ್ಟು ಬೆಲೆ ಕೊಡಬಹುದು  ? 10 ರೂಪಾಯಿ ? 100 ರೂಪಾಯಿ  ? ಆದ್ರೆ ಅಂಗಡಿಯವ ಬರಿಯ ಚಕ್ಕುಲಿ ವಾಸನೆಗೆ ದುಡ್ಡು ಕೊಡು ಅಂದ್ರೆ ನಿಮಗೆ ಹೇಗನ್ನಿಸಬಹು ? ಹೌದು ವಿಚಿತ್ರ ಅನ್ನಿಸುತ್ತೆ ಅಲ್ವಾ ?  ಈ ಕತೆಯಲ್ಲಿ ಹೀಗಾದ ಮನುಷ್ಯ ಒಬ್ಬನಿಗೆ ಹೂಡ್ಜ ಹೇಗೆ ನ್ಯಾಯ ಕೊಡಿಸಿದ ಅನ್ನೋದನ್ನ ಕೇಳೋಣ . 

View Details

ಈರುಳ್ಳಿ , ಬೆಳ್ಳುಳ್ಳಿಗಳು ಮನೆಗಳಲ್ಲಿ ಎಷ್ಟು ಸಾಮಾನ್ಯ ಅಲ್ವೇ ?  ಒಂದು ಕಾಲದಲ್ಲಿ ಇವು ಬೆಳ್ಳಿ , ಬಂಗಾರಕ್ಕಿಂತಲೂ ಅಮೂಲ್ಯವಾಗಿದ್ದವು ಅಂದ್ರೆ ಆಶರ್ಯ ಆಗುತ್ತೆ ಅಲ್ವೇ ? ಈ ಸಲದ ಕತೆಯಲ್ಲಿ ಅಂಥ ಒಂದು ಊರಿಗೆ ಹೋಗೋಣ ?   A man learns that there is a st

View Details

ಈ ಸಲದ ಕತೆ ದಕ್ಷಿಣ ಅಮೆರಿಕಾದ ಬುಡಕಟ್ಟು ಜನಾಂಗದಲ್ಲಿ ಒಂದಾದ " ವಾರವು " ಜನರಿಂದ ಹೇಳಲ್ಪಟ್ಟ ಕತೆ .  ಈ ಜನರು ನಮ್ಮ ಹಾಗೆ ಸೂರ್ಯನನ್ನ ದೇವರು ಅಂತ ಭಾವಿಸ್ತಿದ್ರಂತೆ .  

ವಿಜ್ಞಾನ ಸೂರ್ಯನ ಚಲನೆಯನ್ನ ವಿವರಿಸೋ ಮುಂಚೆ , ಈ ಜನ ಸೂರ್ಯನ ಬೆಳಕು - ಕತ್ತಲು , ಸೂರ್ಯೋದಯ - ಸೂರ್ಯಾಸ್ತಗಳನ್ನು ಬಹಳ ಚಂದವಾಗಿ ಕತೆಗಳ ಮೂಲಕ ವಿವರಿಸುತ್ತಿದ್ದರು .  ಅಂತದೇ ಒಂದು ಉದಾಹರಣೆ ಈ ಕತೆ . 

ಈ ಕತೆಯಲ್ಲಿ ಸೂರ್ಯನನ್ನ ಮನುಷ್ಯನೊಬ್ಬ ಕದ್ದುಕೊಂಡು ಹೋದಾಗ , ಪುಟ್ಟ ಹುಡುಗಿಯೊಬ್ಬಳು ಹೇಗೆ ಬಿಡಿಸಿಕೊಂಡು ಬಂದು ಮತ್ತೆ ಪ್ರಪಂಚಕ್ಕೆ ಬೆಳಕು ಕೊಡುತ್ತಾಳೆ ಅನ್ನೋದನ್ನು ಕೇಳೋಣ . 

View Details

A charming Venezuelan story about a village that banned Chocolate and a boy that loved it so much that he went on an adventure all by himself to learn about it.  This story teaches us about curiosity, perseverance and patience,  all of which are important life skills. 

Enjoy this with a cup of Hot Chocolate. !

View Details

ಸಿಂಹ ಅಂದ್ರೆ ಯಾರಿಗ್ ಭಯ ಆಗಲ್ವ ? ಅಂತ ಭಯಾನಕ ಪ್ರಾಣಿಯಿಂದ ಕೂದಲು ಕಿತ್ಕೊಂಡು ಬರೋದು ಅಂದ್ರೆ ಏನು ? ಐಶಾ ಮತ್ತು ದಾನಿ ಅನ್ನೋ  ಅಕ್ಕ ತಮ್ಮ ಹೇಗೆ ಸಿಂಹದ ಕೂದಲನ್ನ ತೆಗೆದುಕೊಳ್ಳೋ ಮುಖಾತರ ನಿತ್ಯ ಜಗಳವನ್ನು ನಿಲ್ಲಿಸಿದರು ಅಂತ ಕೇಳೋಣ . 

View Details

ಈ ಸಲದ ಕಥೆಗೆ ನಾವು ನಿಮ್ಮನ್ನು ಯೂರೋಪಿಗೆ ಕರೆದೊಯ್ಯಲಿದ್ದೇವೆ.  ತುಂಬಾ ಜನಪ್ರಿಯವಾಗಿರೋ "ರಾಜಕುಮಾರನ ಕತ್ತೆ ಕಿವಿಗಳು " ಅನ್ನೋ ಜನಪದ ಕತೆಯನ್ನು ಈ ಸಲ ನಮ್ಮ ತಂಡದವರು ಪ್ರಸ್ತುತ ಪಡಿಸಲಿದ್ದಾರೆ.

ಬೇರೆಯವರ ಮೇಲೆ ತೋರಿಸೋ ದರ್ಪ ಮತ್ತು ಅಹಂಕಾರ ಹೇಗೆ ನಮ್ಮ ಮೇಲೆ ತಿರುಗಿಬೀಳ ಬಹುದು ಅನ್ನೋದಕ್ಕೆ ಈ ಕತ್ತೆ ಅತ್ಯುತ್ತಮ ಉದಾಹರಣೆ . 

ಈ ಕತೆಯ ಮೂಲ ಇಲ್ಲಿನಿಂದ ಆಯ್ದುಕೊಂಡಿದ್ದೇವೆ : https://www.goodreads.com/book/show/5660410-the-king-with-horse-s-ears-and-other-irish-folktales

This week's story is a very popular European folk tale about an arrogant prince with Donkey ears. This story is an excellent example of the proverb "Those who live in Glass houses shouldn't throw stones at others". 

View Details

ಇಂಗ್ಲೆಂಡಿನ ಹಳ್ಳಿ ಒಂದರಲ್ಲಿ ವಾಸ ಮಾಡ್ತಿದ್ದ ಮುಗ್ದ ಹುಡುಗ ಜ್ಯಾಕ್ , ಹಳ್ಳಿ ಜನರಿಂದ ಯಾವಾಗ್ಲೂ "ಪೆದ್ದ , ಪೆದ್ದ " ಅನ್ನಿಸಿಕೊಳ್ತಿದ್ದ.  ಆದರೆ   , ಅದೇ ಮುಗ್ದತನ ಅವನ ಜೀವನ ಅಷ್ಟೇ ಅಲ್ಲ, ಬೇರೆಯವರ ಜೀವನವನ್ನೂ ಹೇಗೆ ಬದಲಿಸಿತು ಅನ್ನೋದನ್ನು ಈ ಹಾಸ್ಯ ಭರಿತ ಕತೆ ಹೇಳುತ್ತದೆ . 

Lazy Jack , an English tale, is a humor story about a good for nothing boy called Jack, who with a series of hilarious incidents ends up meeting his future wife and adds fun to her life too. 

Story is inspired from this link: http://www.sacred-texts.com/neu/eng/eft/eft28.htm 

View Details

ಜಾಗತಿಕ ಜನಪದ ಕತೆಗಳ ಮಾಲಿಕೆಯ 3ನೇ ಕತೆ , ಉತ್ತರ ಅಮೇರಿಕ ಖಂಡದ "ಇಂಡಿಯನ್ " ಸಂಸ್ಕೃತಿಯಲ್ಲಿ ಹೇಳಲ್ಪಡುವ ಒಂದು ಜನಪ್ರಿಯ ನೀತಿ ಕತೆ .  "Tops and Bottoms" ಎಂದು ಜನಪ್ರಿಯವಾಗಿರೋ ಈ ಕಥೆಯ ಪಾತ್ರಧಾರಿಗಳು ಸೋಮಾರಿ ಕರಡಿ ಹಾಗೂ ಚತುರ ಮೊಲ.   ಪರಿಶ್ರ

View Details

ಈ ಬಾರಿಯ ಕತೆಯನ್ನು ನಾವು ಟಿಬೆಟ್ಟಿನ ಜಾನಪದ ಲೋಕದಿಂದ ಆಯ್ದು ತಂದಿದ್ದೇವೆ . ಕತೆಯ ಮೂಲ ದೇಶವಾದ ಟಿಬೆಟ್ ನ  ಹಿನ್ನಲೆ ಸಂಗೀತದಿಂದ ಈ ಕಥೆ ಪುಟಾಣಿಗಳಿಗೆ ಇನ್ನಷ್ಟು ಹತ್ತಿರವಾಗುವುದರಲ್ಲಿ ಸಂಶಯ ಇಲ್ಲ . 

ಈ ಕತೆಯನ್ನು ಕೇಳಿ ಹಾಗೂ ನಮ್ಮ ವೆಬ್ಸೈಟ್ http://www.kelirondukatheya.org ನಿಂದ ಚಿತ್ರಪುಟಗಳನ್ನು ಕೂಡ ತೆಗೆದುಕೊಂಡು ಬಣ್ಣ ಹಚ್ಚಿ.  

For this week, We bring you a charming Tibetan folktale involving animals.  The story is also accompanied by a melodious tibetian music involving bells and flutes. 

Don't forget to download a charming coloring page that our Artists have created just for this story. 

Enjoy listening to this and please do send any feedback to kelirondu@gmail.com

View Details

" ಕೇಳಿರೊಂದು ಕಥೆಯ " ಕಥಾ ಸರಣಿಯ "ವಿಶ್ವ ಜಾನಪದ ಕತೆ "ಗಳ ಮಾಲಿಕೆಯಲ್ಲಿ  ಮೊದಲನೇ ಕಂತಿನ ಕತೆ  ಜಪಾನ್ ದೇಶದಿಂದ ಆಯ್ದ "ಮಿಸಾಕೊ ಮತ್ತು ಓನಿ " ಯ ಕಥೆ .   ಈ ಓನಿ ಅಂದರೆ ಏನು ಅಂತ ಯೋಚನೆ ಮಾಡ್ತಿದ್ದೀರಾ ? ನಮ್ಮ ಬಕಾಸುರ , ಕುಂಭಕರ್ಣನ ಹಾಗೆ ಜಪ

View Details

This week, lets listen to the story of how a talkative turtle learns a lesson of about listening.  This story is a nice reminder for those of us who have plenty to talk, but little time to listen. :) 

Just like last week, do encourage your kids to download coloring pages from our website and enjoy some coloring time. And if they would like their coloring to be displayed on our website or shared on our facebook page, do email kelirondu@gmail.com  or message on https://fb.me/kelirondukatheya. 

ಬಾಯಿ ಬಡುಕ  ಆಮೆಯೊಂದು ತಾನು ಮಾತನಾಡೋದಷ್ಟೇ ಮುಖ್ಯ ಇತರರ ಮಾತನ್ನು ಕೇಳಿಸಿಕೊಳ್ಳುವುದೂ ಅಷ್ಟೇ ಮುಖ್ಯ ಎಂಬೋದನ್ನ ಪ್ರಯಾಸದ ಮಾರ್ಗವಾಗಿ ಕಲಿಯೋದನ್ನ ಕೇಳೋಣ . 

ಬೇರೆಯವರಿಗೆ ಅವಕಾಶ ಇಲ್ಲದಂತೆ ಸದಾ ಮಾತನಾಡೋ ಚಟ ಇರೋರಿಗೆ  ಒಳ್ಳೆ ಮಾದರಿ ಈ ಕಥೆ ಅಲ್ವೇ  ?  

View Details

Here is our 10th episode in Season 1. 

This time , we present you the classic tale of a cap seller losing his caps to a bunch of monkeys and how an unexpected action of his makes the monkeys return his caps back. 

We also have another surprise packaged along with the story for you. ! To know what the surprise is, do listen to the very end. We promise, you will be pleasantly surprised. !!

For those that cannot get to it, we will reveal the surprise tomorrow on our facebook page.

View Details

In this episode, we will listen to a story about how a Lazy , troublesome lion met its end by a tiny Rabbit.

We also have an exciting announcement.  We will be ending this season after publishing 2 more stories , after which we will break for a week for a special episode before starting our Season 2.    

If you have ideas/ suggestions on special episode, we will be excited to hear about it. 

As always, you can reach us on fb.me/kelirondukatheya / www.kelirondukatheya.org.

View Details

ಪುಟ್ಟದಾದ ಇರುವೆ ತನಗಿಂತ ಎಷ್ಟೋ ದೊಡ್ಡದಾದ ಪಾರಿವಾಳದ ಜೊತೆ ಗೆಳೆತನ ಹೇಗೆ ಬೆಳೆಸಿತು ? 

ಕೈಲಾದ ಸಹಾಯ ಮಾಡೋದಕ್ಕೆ ವಯಸ್ಸು ಅಥವಾ ಗಾತ್ರ ಸೀಮಿತ ಅಲ್ಲ ಅನ್ನೋದನ್ನ ದೊಡ್ಡ ಚಿಕ್ಕವರು ಎಲ್ಲರಿಗೂ ಮನವರಿಕೆ ಮಾಡಿ ಕೊಡುತ್ತೆ ಈ ಕತೆ . 

ಎಂದಿನ ಹಾಗೆ ನಮ್ಮ ಕಲಾವಿದರ ಚಂದವಾದ ನಿರೂಪಣೆಯಲ್ಲಿ ಈ ಕತೆ ಎಲ್ಲರಿಗೂ ಇಷ್ಟ ಆಗುತ್ತೆ ಅಂತ ಆಶಿಸುತ್ತೇವೆ . 

View Details

We are back again with an Aesop's fable about a weakling goat kid using brains to escape from a hungry Wolf. 

This episode is one of our favorites because we have experimented with background sounds, digitally edited voices and also a special irish flute song. !

We would love to know what you think about this story as well as our changes. 

As always, please let us know via facebook / email  etc.

View Details

ಕಳೆದ ಸಲದ ಕಥೆಯ ಹಾಗೆ ಈ ಸಲದ ಕಥೆ ಕೂಡ ಪ್ರಾಮಾಣಿಕತೆ ಏಕೆ ಮುಖ್ಯ ಎಂಬೋದನ್ನ ತೋರಿಸೋ ಕಥೆ .  ಈ ಕಥೆಯಲ್ಲಿ ತನ್ನ ಇದ್ದ ಒಂದೇ ಒಂದು ಕಬ್ಬಿಣದ ಕೊಡಲಿಯನ್ನ ಕಳೆದುಕೊಂಡ ರಾಮು , ಅದರ ಬದಲಾಗಿ ಚಿನ್ನದ ಕೊಡಲಿ ಸಿಕ್ಕಾಗ ಯಾಕೆ ಬೇಡ ಅಂತ ಹೇಳಿದ .

View Details

What would you do if you don't get what you want ? Would you work hard or cheat ? 

This week's story describes what happened to a fox that decided to cheat its own friends in order to get what he wanted. 

ನಮಗೆ ಬೇಕಾಗಿರೋ ವಸ್ತು ಸಿಗ್ಲಿಲ್ಲ ಅಂದಾಗ ಬೇಜಾರಾಗೋದು ಸಹಜ ಅಲ್ವೇ  ?  ಆದ್ರೆ ನಮಗೆ ಆ ವಸ್ತು ಸಿಕ್ಬೇಕು  ಅಂತ ನಮ್ಮ ಜೊತೆಯಲ್ಲಿರೋರಿಗೆ ಮೋಸ ಮಾಡಿದರೆ ಸರಿ ಇರೋದಿಲ್ಲ ತಾನೇ  ? 

ಹಾಗೆ ಮೋಸ ಮಾಡಿದ ಒಂದು ನರಿಗೆ ಏನಾಯ್ತು ಈ ಕಥೆಯಲ್ಲಿ ಕೇಳೋಣ  ? 

View Details

ನೀವು ಚಿನ್ನದ  ಮೊಟ್ಟೆ ಇದೋ ಬಾತು ಕೋಳಿಯನ್ನ ಎಂದಾದರೂ ನೋಡಿದ್ದೀರಾ ?  ಈ ಕತೆಯಲ್ಲಿ ಅಂಥಾ ಒಂದು ಬಾತು ಕೋಳಿಯನ್ನ ಸಾಕಿದ್ದ ಮನುಷ್ಯನ ಬಗ್ಗೆ ತಿಳಿಯೋಣ  ?  " ಅತೀ ಆಸೆ ದುಃಖಕ್ಕೆ ಮೂಲ " ಅಂತ ತೋರಿಸಿ ಕೊಡೊ ಪುಟ್ಟದಾದ ಕಥೆ ಇದು .  In this episode, let

View Details

ಈ ಕಂತಿನಲ್ಲಿ " ಕೇಳಿರೊಂದು ಕಥೆಯ " ಕಾರ್ಯಕ್ರಮದ ಚಾಲಕರಲ್ಲೊಬ್ಬರಾದ ಆನಂದ್  ಹೆಮ್ಮಿಗೆ ಈ ಕಾರ್ಯಕ್ರಮದ ಹಿಂದಿನ ಉದ್ದೇಶ ಮತ್ತು ಮುಂಬರುವ ಯೋಜನೆಗಳ ಬಗ್ಗೆ ಒಂದಿಷ್ಟು ಹಂಚಿಕೊಂಡಿದ್ದಾರೆ . 

In this Welcome episode, Anand Hemmige shares the motivation behind this podcast and s

View Details

A charming story about a lonely and hungry fox learning a life lesson about curiosity when it encounters a drum and mistakes it to be food. !

Versions of this tale have appeared in various cultures, while this version is borrowed from Panchatantra, a popular ancient collection of moral stories from India.

Hear and enjoy. Please don't forget to provide your feedback by rating us or emaiing us at kelirondu@gmail.com or fb.me/kelirondukatheya